ಶನಿವಾರ, 14 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.4ರಷ್ಟು ಹೆಚ್ಚಳ
Authored by:
Basavaraj Halli
ನವದೆಹಲಿ: ಕೇಂದ್ರ ಸರ್ಕಾರೀ ನೌಕರಿಗೆ ಕೇಂದ್ರವು ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು(ಡೈಲಿ ಅಲ್ಲೋವನ್ಸ್) ಶೇಕಡಾ 4ರಷ್ಟು ಹೆಚ್ಚಿಸಿ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಈ ಕುರಿತು ಅಧಿಕೃತವಾಗಿ ತಿಳಿಸಿದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು, ಸುದ್ದಿಗೋಷ್ಠಿಯನ್ನು ಏರ್ಪಡಿಸಿ ಕೇಂದ್ರ ಸರ್ಕಾರಿ ನೌಕರರ ಡಿಎ ಶೇ.4 ರಷ್ಟು ಹೆಚ್ಚಿಸಲು ಸಂಪುಟ ತೀರ್ಮಾನಿಸಿದೆ ಎಂದು ತಿಳಿಸಿದರು.
ಸದ್ಯ ಇರುವ ತುಟ್ಟಿಭತ್ಯೆ ಶೇ.17 ರಷ್ಟು ಏರಿಕೆಯಾಗಿದ್ದು ಶೇ.21ಕ್ಕೆ, ಇದರಿಂದ ಪ್ರಯೋಜನ 50 ಲಕ್ಷ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ ಅನುಕೂಲ.