ಸೋಲ್‌: ಕಳೆದ ವರ್ಷ ವಿಯೆಟ್ನಾಂ ರಾಜಧಾನಿ ಹನೋಯ್‌ಯಲ್ಲಿ ನಡೆದ ಕಿಮ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವಿನ ಮಾತುಕತೆ ಮುರಿದುಬಿದ್ದ ಬೆನ್ನಲ್ಲೇ ಬಹು ದೂರದ ಗುರಿಯತ್ತ ಚಿಮ್ಮಬಲ್ಲ ನಿರ್ದೇಶಿತ ಕ್ಷಿಪಣಿಗಳ ಪರೀಕ್ಷೆಯನ್ನು ಉತ್ತರ ಕೊರಿಯಾ ನೆರವೇರಿಸಿತು. ಈ ಮೂಲಕ ಉತ್ತರ ಕೊರಿಯಾ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯ ವೃದ್ಧಿಸಿಕೊಳ್ಳುತ್ತಿದೆ. ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ಎಚ್ಚರಿಕೆ ನೀಡುವುದೇ ಈ ಕ್ಷಿಪಣಿ ಪರೀಕ್ಷೆಯ ಮುಖ್ಯ ಉದ್ದೇಶವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.