ಬುಧವಾರ, 11 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಶಸ್ತ್ರಾಸ್ತ್ರ ರಫ್ತು ಮಾಡುವ ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತ
Authored by:
Basavaraj Halli
ಜಾಗತಿಕ ಮಟ್ಟದಲ್ಲಿ ಶಸ್ತ್ರಾಸ್ತ್ರ ವರ್ಗಾವಣೆ ಮಾಡುವ ಬಗ್ಗೆ SIPRIನಿಂದ ದತ್ತಾಂಶ ವರದಿ ಪ್ರಕಾರ ಇದೇ ಪ್ರಥಮ ಬಾರಿಗೆ ಶಸ್ತ್ರಾಸ್ತ್ರಗಳನ್ನ ವಿವಿಧ ರಾಷ್ಟ್ರಗಳಿಗೆ ರಫ್ತು ಮಾಡುವ ದೇಶಗಳ ಸಾಲಿನಲ್ಲಿ ಭಾರತವು ಕೂಡ ಸ್ಥಾನವನ್ನು ಪಡೆದಿದೆ.
ಪ್ರಸ್ತುತ 23 ನೇ ಸ್ಥಾನದಲ್ಲಿರುವ ಭಾರತವು ಈ ಸ್ಥಾನವನ್ನು ದಾಟಿ, ಮುಂಬರುವ ವರ್ಷಗಳಲ್ಲಿ ಮೇಲಕ್ಕೆ ಏರಲಿದೆ. ಇದಕ್ಕೆ ಪೂರಕವೆಂಬಂತೆ ಕೇಂದ್ರ ಸರ್ಕಾರವು ವಿದೇಶಗಳಲ್ಲಿ ಶಸ್ತ್ರಾಸ್ತ್ರಗಳನ್ನು ಮಾರುವ ಯೋಜನೆಗಳಿಗೆ ಉತ್ತೇಜಿಸುತ್ತಿದೆ ಎಂಬುದು ವಿಶೇಷ.