ಸೋಮವಾರ, 09 ಮಾರ್ಚ್ 2020
5:30 ಪೂರ್ವಾಹ್ನ
Daily PDF
ಮಹಿಳಾ ಟಿ20 ವಿಶ್ವಕಪ್ : ಆಸ್ಟ್ರೇಲಿಯಾ ಮುಡಿಗೆ ವಿಶ್ವಕಪ್ ಕಿರೀಟ
Authored by:
Basavaraj Halli
ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ವಿಶ್ವ ಮಹಿಳಾ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಬೇಕೆಂದಿದ್ದ ಭಾರತೀಯರ ವನಿತೆಯರ ಕನಸು ನನಸಾಗಲಿಲ್ಲ, ಇಂದು ಸಿಡ್ನಿಯಲ್ಲಿ ನಡೆದ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಸೋಲೋಪ್ಪಿಕೊಳ್ಳುವ ಮೂಲಕ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಶರಣಾಯಿತು.
ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 184 ರನ್ ಗಳಿಸಿತು. ಆದರೆ ಭಾರತ 19.1 ಓವರ್ ಗಳಲ್ಲಿ 99 ರನ್ ಗಳಿಗೆ ಆಲೌಟ್ ಆಗುವ ಮೂಲಕ 85 ರನ್ ಗಳ ಸೋಲೊಪ್ಪಿಕೊಂಡಿತು.