ಭಾರತೀಯ ವಾಯು ಸೇನೆಯು AN 32 ವಿಮಾನವನ್ನು ಏರ್‍‍ಕ್ರಾಫ್ಟ್ ಗಳನ್ನು ಸಾಗಾಣೆಗೆ ಮಾಡಲು ಬಳಸಲಾಗುತ್ತದೆ. ಸಧ್ಯ ಈ ಎ‍ಎನ್ 32 ವಿಮಾನಕ್ಕೆ ಇಂಧನವಾಗಿ ಬಯೊ ಫ್ಯೂಯಲ್ ಅನ್ನು ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿರವರು ಎ‍ಎನ್ 32 ವಿಮಾನದ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ. ಈ ವಿಮಾನವು ಬಯೊ ಫ್ಯೂಯಲ್ ಹೊಂದಿ ಲೇಹ್‍‍ನಲ್ಲಿರುವ ಕುಶೋಕ್ ಬಗುಲಾ ರಿಂಬೋಶ್ ವಿಮಾನ ನಿಲ್ದಾಣದಿಂದ ಹಾರಾಟ ನಡೆಸಿದೆ. ಈ ವಿಮಾನದಲ್ಲಿ 10% ಬಯೊ ಜೆಟ್ ಫ್ಯೂಯಲ್ ಅನ್ನು ಬಳಸಲಾಗಿದೆ. ಈ ಬಯೊ ಫ್ಯೂಯಲ್ ಅನ್ನು ಸ್ಥಳೀಯವಾಗಿ ತಯಾರಿಸಲಾಗಿದೆ.