ಸೋಮವಾರ, 24 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಏಶ್ಯನ್ ಕುಸ್ತಿ ಚಾಂಪಿಯನ್ಶಿಪ್: ವಿಜಯ್ ಕುಮಾರ್ ದಹಿಯಾಗೆ ಬಂಗಾರ; ಭಜರಂಗ್, ಸತ್ಯವ್ರತ್, ಗೌರವ್ಗೆ ಬೆಳ್ಳಿ
Authored by:
Basavaraj Halli
ನವದೆಹಲಿ: ಇಲ್ಲಿ ನಡೆಯುತ್ತಿರುವ ಏಶ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಸ್ಪರ್ಧೆಯಲ್ಲಿ ಭಾರತದ ಪುರುಷರ ವಿವಿಧ ವಿಭಾಗಗಳ 4 ಫೈನಲ್ ಸ್ಪರ್ಧೆಗಳಲ್ಲಿ ಭಾರತ 1 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ.
* ಬಂಗಾರ ಪದಕಕ್ಕೆ ಕೊರಳೊಡ್ಡಿದ ಹಿರಿಮೆ ವಿಜಯ್ ಕುಮಾರ್ ದಹಿಯಾ ಅವರ ದಾಯಿತು, 57 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ದಹಿಯಾ ತಜಿಕಿಸ್ಥಾನದ ಹಿಕ್ಮತುಲ್ಲೊ ವೊಹಿದೋವ್ ವಿರುದ್ಧ 10-0 ಅಂತರದ ಭರ್ಜರಿ ಗೆಲುವು ಸಾಧಿಸಿದರು.
* 65 ಕೆ.ಜಿ. ವಿಭಾಗದಲ್ಲಿ ಭಜರಂಗ್ ಪುನಿಯ ಬೆಳ್ಳಿ ಪದಕ ಪಡೆದರು, ಅವರು 2-10 ಅಂತರದಿಂದ ಜಪಾನಿನ ಟಕುಟೊ ಒಟುಗುರೊ ವಿರುದ್ಧ ಸೋಲುಂಡರು.
* 97 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಸತ್ಯವೃತ್ ಕಾದಿಯಾನ್ ಅವರು ಇರಾನ್‌ನ ಮೊಜಬ ಮೊಹಮ್ಮದ್ ಶಫಿ ವಿರುದ್ಧ 0-10 ಅಂತರದಿಂದ ಸೋಲು ಕಂಡು ಬೆಳ್ಳಿ ಪದಕ ಪಡೆದರು.
* 79 ಕೆ.ಜಿ. ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಗೌರವ್ ಬಲಿಯಾನ್ ಕಿರ್ಗಿಸ್ಥಾನದ ಅರ್ಸಾಲನ್ ಬುಡಝಪೋವ್ ವಿರುದ್ಧ 5-7 ಅಂತರದ ಸೋಲು ಕಂಡು ಬೆಳ್ಳಿ ಪದಕ ಪಡೆದರು.