ರವಿವಾರ, 23 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಸೇನಾ ಕೇಂದ್ರ ಕಚೇರಿ ನಿರ್ಮಾಣಕ್ಕೆ ದೆಹಲಿಯಲ್ಲಿ ಅಡಿಗಲ್ಲು
Authored by:
Basavaraj Halli
ಭಾರತೀಯ ಸೇನೆಯ ಮುಖ್ಯ ಕಚೇರಿಯ ಹೊಸ ಕಟ್ಟಡ ನಿರ್ಮಾಣಕ್ಕೆ ಉದ್ದೇಶಿಸಲಾಗಿದ್ದು ನವದೆಹಲಿಯ ಕಂಟೋನ್‌ಮೆಂಟ್ ಪ್ರದೇಶದಲ್ಲಿ ಈ ಹೊಸ ಸೇನಾ ಮುಖ್ಯಕಚೇರಿ ಕಟ್ಟಡ ಕೆಲಸ ಆರಂಭಕ್ಕೆ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅಡಿಗಲ್ಲು ಕಾರ್ಯಕ್ರಮ ನೆರವೇರಿಸಿದರು.
ಈ ಕಟ್ಟಡವನ್ನು 7 ಅಂತಸ್ತಿನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಭವನಕ್ಕೆ "ಥಲ್ ಸೇನಾ ಭವನ್" ಎಂದು ಹೆಸರಿಡಲಾಗಿದೆ.
* ಸೂರ್ಯೋದಯದ ಮಾದರಿಯಲ್ಲಿ ಭವನದ ವಿನ್ಯಾಸ ಹೊಂದಿರಲಿದೆ.
* ಒಟ್ಟು 39 ಎಕರೆ ಪ್ರದೇಶದ ವ್ಯಾಪ್ತಿಯಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.