ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ರಾಮಮಂದಿರ ಟ್ರಸ್ಟ್‌ನ ಅಧ್ಯಕ್ಷರಾಗಿ ನೃತ್ಯ ಗೋಪಾಲ ದಾಸ ಆಯ್ಕೆ
Authored by:
Basavaraj Halli
ಹೊಸದಿಲ್ಲಿ: ರಾಮಮಂದಿರ ಟ್ರಸ್ಟ್‌ನ ಮೊದಲ ಸಭೆ ನವದೆಹಲಿಯಲ್ಲಿ ನಡೆದಿದ್ದು, ಮಹಾಂತ ನೃತ್ಯ ಗೋಪಾಲ ದಾಸ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ
ಉಳಿದಂತೆ
* ಚಂಪತ್ ರಾಯ್ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ,
* ನೃಪೇಂದ್ರ ಮಿಶ್ರಾ ಅವರು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥರರಾಗಿ ಆಯ್ಕೆ
* ಪುಣೆಯ ಸ್ವಾಮಿ ಗೋವಿಂದ ದೇವ ಗಿರಿ ಅವರು ಖಜಾಂಜಿಯಾಗಿ ಆಯ್ಕೆ
ಹಿರಿಯ ನ್ಯಾಯವಾದಿ ಕೆ.ಪರಾಶರನ್ ಅವರ ನಿವಾಸದಲ್ಲಿ ನಡೆದ ಈ ಮೊದಲ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.
* ಕರ್ನಾಟಕದಿಂದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಕೂಡ ಈ ಟ್ರಸ್ಟ್ ನ ಸದಸ್ಯರಲ್ಲೊಬ್ಬರಾಗಿದ್ದಾರೆ.