ಶುಕ್ರವಾರ, 21 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿಯಾ ವಿಭಾಗದ ಐದು ನಿಲ್ದಾಣಗಳಿಗೆ ISO ಪ್ರಮಾಣ ಪತ್ರ
Authored by:
Basavaraj Halli
ನೈಋತ್ಯ ರೈಲ್ವೆ ವಲಯದ ಐದು ರೈಲ್ವೆ ನಿಲ್ದಾಣಗಳಿಗೆ ISO 14001-2015 ಪ್ರಮಾಣ ಪತ್ರ ಲಭಿಸುವುದರೊಂದಿಗೆ ಒಟ್ಟು ಹುಬ್ಬಳ್ಳಿ ವಿಭಾಗದ 9 ರೈಲು ನಿಲ್ದಾಣಗಳು ಸ್ವಚ್ಛತೆಯಲ್ಲಿ ISO ಪ್ರಮಾಣ ಪತ್ರ ಪಡೆದಂತಾಯಿತು.
ಹುಬ್ಬಳ್ಳಿ ವಿಭಾಗದ ಐದು ರೈಲ್ವೆ ನಿಲ್ದಾಣಗಳಾದ ಹೊಸಪೆಟೆ, ಬಳ್ಳಾರಿ, ವಿಜಯಪುರ, ಲೋಂಡಾ ಮತ್ತು ಗದಗ ನಿಲ್ದಾಣಗಳು ಹೊಸದಾಗಿ ಐಎಸ್‌ಒ 14001-2015 (ಪರಿಸರ ನಿರ್ವಹಣಾ ವ್ಯವಸ್ಥೆ) ಪ್ರಮಾಣೀಕರಣ ಪಡೆದ ನಿಲ್ದಾಣಗಳಾಗಿವೆ.
ಹುಬ್ಬಳ್ಳಿ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ್ ಮಲ್ಖೆಡೆ ಅವರು ಸೋಮವಾರ ಪ್ರಮಾಣ ಪತ್ರಗಳನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಪ್ರತಿನಿಧಿಗಳಿಂದ ಪಡೆದರು.