ಫೆಬ್ರವರಿ 13, 2020 ರಂದು ನಾಗ್ಪುರ ಕಿತ್ತಳೆ ಹಣ್ಣುಗಳನ್ನು ನವೀ ಮುಂಬಯಿಯ ಬಂದರಿನ ಮೂಲಕ ದುಬೈಗೆ ಕಳುಹಿಸಲಾಯಿತು. ಈ ಕಿತ್ತಳೆಗಳನ್ನ ಶೈತ್ಯೀಕರಿಸಿದ ಪಾತ್ರೆಗಳಲ್ಲಿ ಕಳುಹಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಸುಮಾರು 40 ಹೆಕ್ಟೇರ್ ಭೂಮಿಯಲ್ಲಿ ನಾಗ್ಪುರ ತಳಿಯೆಯ ಕಿತ್ತಳೆ ಹಣ್ಣುಗಳನ್ನು ಬೆಳೆಯಲಾಗುತ್ತದೆ. APEDA (ಕೃಷಿ ಮತ್ತು ಸಂಸ್ಕರಿಸಿದ ಆಹಾರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ) ಕೃಷಿ ರಫ್ತು ನೀತಿಯ ಅನುಸಾರ ಕಿತ್ತಳೆ ಹಣ್ಣುಗಳ ರಫ್ತು ಮಾಡಿತು.