ಸ್ಯಾನ್ ಫ್ರಾನ್ಸಿಸ್ಕೋ​: ಚೀನಾದಲ್ಲಿ ಮಾರಣಾಂತಿಕವಾಗಿರುವ ಕೊರೊನಾ ವೈರಸ್​ (COVID-19) ಚೀನಾ ಸೇರಿ ಹಲವು ರಾಷ್ಟ್ರಗಳಲ್ಲಿ ಪತ್ತೆಯಾಗಿದೆ. ಇದೆ ಕಾರಣದ ಭಯದಿಂದಾಗಿ ಫೇಸ್ಬುಕ್ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಆಯೋಜಿಸಿದ್ದ ತನ್ನ ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದೆ. ಫೇಸ್ಬುಕ್ ಸಂಸ್ಥೆಯು ವಾಟ್ಸಾಪ್​, ಫೇಸ್​ಬುಕ್​, ಇನ್ಸ್ಟಾಗ್ರಾಂ ಆಯಪ್​ಗಳ ಮಾಲೀಕತ್ವ ಹೊಂದಿದೆ. ಸಂಸ್ಥೆಯು ಮಾರ್ಚ್​ ತಿಂಗಳ 9 ರಿಂದ 12ನೇ ತಾರೀಖಿನವರೆಗೆ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ಗ್ಲೋಬಲ್​ ಮಾರ್ಕೆಟಿಂಗ್​ ಶೃಂಗಸಭೆಯನ್ನು ಆಯೋಜಿಸಿತ್ತು.