ಸೋಮವಾರ, 10 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಮುಂಬೈನಲ್ಲಿ ನಡೆದ ಇ-ಆಡಳಿತದ ರಾಷ್ಟ್ರೀಯ ಸಮಾವೇಶ
Authored by:
Basavaraj Halli
ನೂತನ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಂಡು ಅವುಗಳ ಮೂಲಕ ಆಡಳಿತವನ್ನು ಉತ್ತಮ ಪಡಿಸಲು ಇ-ಆಡಳಿತದ 23 ನೇ ರಾಷ್ಟ್ರೀಯ ಸಮ್ಮೇಳನವನ್ನು ಫೆಬ್ರುವರಿ 09 ರಂದು ಮುಂಬೈನಲ್ಲಿ ನಡೆಸಲಾಯಿತು.
* ದೇಶದ ಎಲ್ಲಾ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಂದ ನೀಡಲಾಗುವ ರಾಷ್ಟ್ರೀಯ ಇ-ಆಡಳಿತ ಸೇವೆಗಳನ್ನು ಈ ರಾಷ್ಟ್ರೀಯ ಸಮ್ಮೇಳನದಲ್ಲಿ ತೀರ್ಮಾನಿಸಲಾಗಿದೆ.
* ದೆಹಲಿ, ಚಂಡಿಗರ್ ಮತ್ತು ಡಿಯು ಮತ್ತು ದಮನ್ ಕೇಂದ್ರಾಡಳಿತ ಪ್ರದೇಶಗಳು ಇ-ಆಡಳಿತ ಸೇವೆಗಳನ್ನು ನೀಡುವಲ್ಲಿ ಪ್ರಮುಖವಾಗಿವೆ.
* ರಾಜ್ಯಗಳಲ್ಲಿ, ಹರಿಯಾಣ ಮತ್ತು ರಾಜಸ್ಥಾನ ಪ್ರಮುಖರಾಗಿ ಹೊರಹೊಮ್ಮಿದವು.
ಸಮ್ಮೇಳನದಲ್ಲಿ ಪ್ರಮುಖ ಪಾತ್ರವಹಿಸಿದ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿಗಳನ್ನೂ ನೀಡಲಾಯಿತು.