ಗುರುವಾರ, 06 ಫೆಬ್ರುವರಿ 2020
5:30 ಪೂರ್ವಾಹ್ನ
Daily PDF
ಟೋಕಿಯೊ ಒಲಿಂಪಿಕ್ಸ್ಗೂ ಕರೊನಾ ಭೀತಿ
Authored by:
Basavaraj Halli
ಟೋಕಿಯೊ: ಇನ್ನು ಕೇವಲ 06 ತಿಂಗಳ ನಂತರ ನಡೆಯಲಿರುವ ಟೋಕಿಯೊ ಒಲಿಂಪಿಕ್ಸ್ಗೆ ವ್ಯಾಪಕವಾಗಿ ಹರಡುತ್ತಿರುವ ಚೀನಾದ ಮಾರಕ ಸೋಂಕು ಕರೊನಾ ವೈರಸ್ ಭೀತಿ ಎದುರಾಗಿದೆ. ಕರೊನಾ ವೈರಸ್ ಟೋಕಿಯೊ ಒಲಿಂಪಿಕ್ಸ್ ಕಾಡುವ ಬಗ್ಗೆ ಸಂಘಟಕರು ಬುಧವಾರ ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ನಾಲ್ಕು ವರ್ಷಕ್ಕೊಮ್ಮೆನಡೆಯುವ ಜಾಗತಿಕ ಕ್ರೀಡಾಕೂಟವಾದ ಒಲಿಂಪಿಕ್ಸ್ ರದ್ದುಗೊಳಿಸುವ ಯಾವುದೇ ಯೋಚನೆ ಸಧ್ಯ ಇಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.