ಹವಾಯಿ: ಸೂರ್ಯಮಂಡಲದ ಅಧಿಪತಿ ಆಗಿರುವ ಸೂರ್ಯನ ಅತ್ಯಂತ ಸಮೀಪದ ಫೋಟೋವನ್ನು ಅಮೆರಿಕದ ಬಾಹ್ಯಾಕಾಶ ತಜ್ಞರು ಬಿಡುಗಡೆ ಗೊಳಿಸಿದ್ದಾರೆ. ಡೇನಿಯಲ್​ ಕೆ.ಇನೌವೆ ಸೋಲಾರ್​ ದೂರದರ್ಶಕ (ಡಿಕೆಐಎಸ್​ಟಿ)ವನ್ನು ಬಳಸಿ ಈ ಫೋಟೋವನ್ನು ಸೆರೆಹಿಡಿಯಲಾಗಿದ್ದು, ಇದು ಪ್ರಪಂಚದಲ್ಲೇ ಅತ್ಯಂತ ದೊಡ್ಡ ದೂರದರ್ಶಕವಾಗಿದೆ. ಈ ಫೋಟೋವೂ ಬಹುಪಾಲು ಭಾರತೀಯ ಖಾದ್ಯವಾದ ಶೇಂಗಾಚಿಕ್ಕಿಯನ್ನು ಹೋಲುತ್ತದೆ.