ಬುಧವಾರ, 29 ಜನವರಿ 2020
5:30 ಪೂರ್ವಾಹ್ನ
Daily PDF
ಮ್ಯಾನ್ ವರ್ಸಸ್ ವೈಲ್ಡ್ ಕಾರ್ಯಕ್ರಮದಲ್ಲಿ ರಜನೀಕಾಂತ್ ಮತ್ತು ಅಕ್ಷಯ ಕುಮಾರ
Authored by:
Siddaram Halli
ಮ್ಯಾನ್ ವರ್ಸಸ್ ವೈಲ್ಡ್ ಖ್ಯಾತಿಯ ಬೇರ್ ಗ್ರಿಲ್ಸ್ ಮತ್ತು ಅವರ ತಂಡದ ಜೊತೆ ರಜನಿಕಾಂತ್ ಅವರು ಸಾಕ್ಷ್ಯಚಿತ್ರ ಶೂಟಿಂಗ್ ನಲ್ಲಿ ಭಾಗಿಯಾದರು.
ಬೇರ್ ಗ್ರಿಲ್ಸ್ ಅವರು ಇಂಗ್ಲೆಂಡ್ ಮೂಲದ ಸಾಹಸಿಗರಾಗಿದ್ದು, ಮ್ಯಾನ್ ವರ್ಸಸ್ ವೈಲ್ಡ್ ಸರಣಿ ಸಾಕ್ಷ್ಯಚಿತ್ರ ತಯಾರಕರಾಗಿದ್ದಾರೆ, ಇತ್ತೀಚಿಗೆ ಪ್ರಧಾನಿ ಮೋದಿ ಜೊತೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಇವರು ಪ್ರಸ್ತುತ ಭಾರತೀಯ ಚಿತ್ರರಂಗದ ಖ್ಯಾತ ನಟರಾದ ರಜನಿಕಾಂತ ಮತ್ತು ಅಕ್ಷಯ ಕುಮಾರರೊಡನೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ.
ಬಂಡೀಪುರ ದೇಶದಲ್ಲೆ ಅತಿ ಹೆಚ್ಚು ಹುಲಿಗಳಿರುವ ತಾಣ. ಎರಡು ಸಾವಿರಕ್ಕೂ ಹೆಚ್ಚು ಆನೆ, ಚಿರತೆ, ಕಾಡೆಮ್ಮೆ ಕರಡಿ, ಜಿಂಕೆ ಸೇರಿದಂತೆ ಅಸಂಖ್ಯಾತ ಪ್ರಾಣಿಗಳಿರುವ ಬಂಡೀಪುರ ಹುಲಿ ರಕ್ಷಿತಾರಣ್ಯವಾಗಿದೆ .