ಮಂಗಳವಾರ, 28 ಜನವರಿ 2020
5:30 ಪೂರ್ವಾಹ್ನ
Daily PDF
2024ರ ವೇಳೆಗೆ ಭಾರತೀಯ ರೈಲ್ವೆ ಸಂಪೂರ್ಣ ವಿದ್ಯುತ್ತೀಕರಣ: ಪಿಯೂಷ್ ಗೋಯೆಲ್
Authored by:
Basavaraj Halli
2024ರ ವೇಳೆಗೆ ಭಾರತೀಯ ರೈಲ್ವೆ ಇಲಾಖೆಯು ಸಂಪೂರ್ಣ ವಿದ್ಯುತ್ತೀಕರಣದ ಗುರಿ ಹೊಂದಿದ್ದು ಎಲ್ಲಾ ರೈಲುಗಳು ವಿದ್ಯುತ್‌ಗೆ ಬದಲಾಗುವ ನಿರೀಕ್ಷೆಯಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಹೇಳಿದ್ದಾರೆ. ಈಗಾಗಲೇ ಡೀಸೆಲ್ ಮೂಲಕ ಸಾಗುವ ರೈಲ್ವೆ ಎಂಜಿನ್‌ಗಳು ಸೇವೆಯಿಂದ ಹೊರಗುಳಿಯುತ್ತಿವೆ ಎಂದಿದ್ದಾರೆ.
''2024ರ ಹೊತ್ತಿಗೆ, ಇಡೀ ಭಾರತದ ರೈಲ್ವೆ 100 ಪರ್ಸೆಂಟ್‌ನಷ್ಟು ವಿದ್ಯುತ್ ಚಾಲನೆಯಲ್ಲಿ ಸಾಗಲಿವೆ ಎಂದು ನಿರೀಕ್ಷಿಸಲಾಗಿದೆ. ಹೀಗೆ ಸಾಧ್ಯವಾದಲ್ಲಿ ವಿದ್ಯುತ್‌ಚ್ಚಕ್ತಿ ಮೂಲಕವೇ ಸಂಪೂರ್ಣವಾಗಿ ಚಲಿಸುವ ಜಗತ್ತಿನ ಮೊದಲ ರೈಲ್ವೇ ನೆಟ್‌ವರ್ಕ್ ಆಗಲಿದೆ. ಪರಿಸರದ ಜವಾಬ್ದಾರಿ ಬಗ್ಗೆ ನಮಗೆ ಜಾಗೃತಿ ಇದೆ. ನಮ್ಮ ರೈಲು ಜಾಲದ ತ್ವರಿತ ವಿದ್ಯುದೀಕರಣವನ್ನು ನಾವು ಪ್ರಾರಂಭಿಸುತ್ತಿದ್ದೇವೆ'' ಎಂದು ಭಾರತ-ಬ್ರೆಜಿಲ್ ಬಿಜಿನೆಸ್ ವೇದಿಕೆಯಲ್ಲಿ ಪಿಯೂಷ್ ಗೋಯೆಲ್ ಹೇಳಿದರು.