ಮಂಗಳವಾರ, 28 ಜನವರಿ 2020
5:30 ಪೂರ್ವಾಹ್ನ
Daily PDF
ಭಾರತದ ಪ್ರಧಾನಿ ಸ್ಥಾನಕ್ಕೆ ಮೋದಿಯೇ ಸೂಕ್ತ: ಸಮೀಕ್ಷೆ
Authored by:
Surekha Halli
ನವದೆಹಲಿ: ಮೋದಿ ಸರ್ಕಾರ್ 2.0 ಅಧಿಕಾರ ವಹಿಸಿಕೊಂಡ ಬಳಿಕ ಹಲವು ದಿಟ್ಟ, ವಿವಾದಿತ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಬಗ್ಗೆ ದೇಶದ ಜನತೆಯ ಅಭಿಪ್ರಾಯ ಹೇಗಿದೆ ಎಂಬುದನ್ನು ಎಬಿಪಿ ನ್ಯೂಸ್ ಹಾಗೂ ಸಿವೋಟರ್ಸ್ ಸಂಗ್ರಹಿಸಿ ಮುಂದಿಟ್ಟಿದೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ಸಾಕಷ್ಟು ಪ್ರತಿಭಟನೆ, ಗೊಂದಲಗಳಿದ್ದರೂ ಪ್ರಧಾನಿ ನರೇಂದ್ರ ಮೋದಿ ಜನಪ್ರಿಯತೆ ಕುಗ್ಗಿಲ್ಲ ಎಂದು ಸಮೀಕ್ಷೆ ಹೇಳಿದೆ.