ಶುಕ್ರವಾರ, 24 ಜನವರಿ 2020
5:30 ಪೂರ್ವಾಹ್ನ
Daily PDF
ಅಮೆರಿಕದ ಹ್ಯಾರಿಸ್ ಕೌಂಟಿ : ಮೊದಲ ಸಿಕ್ಖ್ ಪೊಲೀಸ್
Authored by:
Surekha Halli
ಹ್ಯೂಸ್ಟನ್: ಅಮೆರಿಕದ ಹ್ಯಾರಿಸ್ ಕೌಂಟಿಯಲ್ಲಿ ಅಮೃತ್ ಸಿಂಗ್ (21) ಎಂಬ ಭಾರತೀಯ ಅಮೆರಿಕನ್ ನಾಗರಿಕನನ್ನು ಇದೇ ಮೊದಲ ಬಾರಿಗೆ ಡೆಪ್ಯುಟಿ ಕಾನ್‌ಸ್ಟೆಬಲ್ ಹುದ್ದೆಗೆ ನೇಮಕ ಮಾಡಲಾಗಿದೆ. ಟೆಕ್ಸಸ್ ಪ್ರಾಂತ್ಯದಲ್ಲಿ ಈ ಐತಿಹಾಸಿಕ ಪ್ರಕ್ರಿಯೆ ನಡೆದಿದೆ.
ಸಿಕ್ಖ್ ಸಮುದಾಯದ ಸಾಂಪ್ರದಾಯಿಕ ಮುಂಡಾಸು ಧರಿಸಿರುವಾತ, ಗಡ್ಡಧಾರಿ ವ್ಯಕ್ತಿ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿಯಾಗಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಮೃತ್ ಸಿಂಗ್ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ತಾವು ಯಾವತ್ತೂ ಕಾನೂನು ಪಾಲನೆಯ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದ್ದೇನೆ ಎಂದಿದ್ದಾರೆ.