ಗುರುವಾರ, 23 ಜನವರಿ 2020
5:30 ಪೂರ್ವಾಹ್ನ
Daily PDF
ರಶ್ಯ: ನೂತನ ಸರಕಾರಕ್ಕೆ ಪುಟಿನ್ ಅನುಮೋದನೆ
Authored by:
Basavaraj Halli
ಮಾಸ್ಕೊ: ರಶ್ಯದ ನೂತನ ಸರಕಾರಕ್ಕೆ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮಂಗಳವಾರ ಅನುಮೋದನೆ ನೀಡಿದ್ದಾರೆ. ಇದು ಹಿಂದಿಗಿಂತ ಹೊಸ ವ್ಯವಸ್ಥೆಯಾಗಿದ್ದು, ಹೊಸ ಮುಖಗಳನ್ನು ಪರಿಚಯಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಅದೇ ವೇಳೆ, ಹಲವಾರು ಹಿರಿಯ ಸಚಿವರನ್ನು ಉಳಿಸಿಕೊಳ್ಳಲಾಗಿದೆ.
ಒಂದು ವಾರದ ಹಿಂದೆ ರಾಜಕೀಯ ವ್ಯವಸ್ಥೆಗೆ ಕಾಯಕಲ್ಪ ನೀಡುವುದಕ್ಕೆ ಪೂರಕವಾಗಿ ಪ್ರಧಾನಿ ಡಿಮಿಟ್ರಿ ಮೆಡ್ವೆಡೆವ್ ನೇತೃತ್ವದ ಸಂಪೂರ್ಣ ಸರಕಾರ ರಾಜೀನಾಮೆ ನೀಡಿತ್ತು. ಬಳಿಕ, ರಾಜಕೀಯದಲ್ಲಿ ಯಾವುದೇ ಆಸಕ್ತಿಯಿರದ ತೆರಿಗೆ ಇಲಾಖೆಯ ಮಾಜಿ ಮುಖ್ಯಸ್ಥ ಮಿಖೈಲ್ ಮಿಶುಸ್ಟಿನ್‌ರನ್ನು ಪುಟಿನ್ ಪ್ರಧಾನಿಯಾಗಿ ನೇಮಿಸಿದ್ದರು.