ಗುರುವಾರ, 23 ಜನವರಿ 2020
5:30 ಪೂರ್ವಾಹ್ನ
Daily PDF
ಡಿಸೆಂಬರ್ನಲ್ಲಿ ಗಗನಯಾನದ ಮೊದಲ ಮಾನವರಹಿತ ಮಿಷನ್: ಇಸ್ರೋ ಮುಖ್ಯಸ್ಥ ಕೆ.ಶಿವನ್
Authored by:
Surekha Halli
ಬೆಂಗಳೂರು: ಭಾರತದ ಮಹತ್ವಾಕಾಂಕ್ಷೆಯ ಚೊಚ್ಚಲ ಗಗನಯಾನದ ಭಾಗವಾಗಿ ಮೊದಲ ಮಾನವ ರಹಿತ ಮಿಷನ್ ಈ ವರ್ಷ ಡಿಸೆಂಬರ್ನಲ್ಲಿ ಉಡಾವಣೆಯಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.
'ಹ್ಯೂಮನ್ ಸ್ಪೇಸ್ಲೈಟ್ ಆಯಂಡ್ ಎಕ್ಸ್ಪ್ಲೋರೇಷನ್- ಪ್ರಸೆಂಟ್ ಚಾಲೆಂಜಸ್ ಆಯಂಡ್ ಫ್ಯೂಚರ್ ಟ್ರೆಂಡ್ಸ್' ಕುರಿತ ಸಿಂಪೋಸಿಯಂನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಮಹತ್ವಾಕಾಂಕ್ಷೆಯ ಮಾನವ ಸಹಿತ ಚಂದ್ರಯಾನ 2021ರ ಡಿಸೆಂಬರ್ನಲ್ಲಿ ನಡೆಸಲು ಉದ್ದೇಶಿಸಿದ್ದು, ಅದಕ್ಕೂ ಪೂರ್ವಭಾವಿಯಾಗಿ ಎರಡು ಮಾನವರಹಿತ ಮಿಷನ್ಗಳನ್ನು 2020ರ ಡಿಸೆಂಬರ್ ಮತ್ತು 2021ರ ಜೂನ್ನಲ್ಲಿ ನಿರ್ವಹಿಸಲಾಗುವುದು ಎಂದು ವಿವರಿಸಿದರು.