ರೋಮ್‌ ರ್‍ಯಾಂಕಿಂಗ್‌ ಸೀರಿಸ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ವಿನೇಶ್‌ ಪೋಗಟ್‌ ಚಿನ್ನದ ಪದಕ ಜಯಿಸಿದ್ದಾರೆ. ಇಬ್ಬರು ಚೀನೀ ಎದುರಾಳಿಗಳನ್ನು ಬಗ್ಗುಬಡಿದ ಬಳಿಕ ಈಕ್ವಡಾರ್‌ನ ಲೂಯಿಸಾ ಎಲಿಜಬೆತ್‌ ವಾಲ್ವೆರ್ಡ್‌ ಅವರನ್ನು ಫೈನಲ್‌ನಲ್ಲಿ 4-0 ಅಂತರದಿಂದ ಉರುಳಿಸುವ ಮೂಲಕ ವಿನೇಶ್‌ ಈ ಸಾಧನೆಗೈದರು. 53 ಕೆಜಿ ವಿಭಾಗದ ಫೈನಲ್‌ನಲ್ಲಿ ಎದುರಾಳಿಯನ್ನು 'ಶೋಲ್ಡರ್‌ ಪುಲ್ಸ್‌' ಪಟ್ಟುಗಳ ಮೂಲಕ ನಿತ್ರಾಣಗೊಳಿಸಿದ ವಿನೇಶ್‌ ಭರ್ಜರಿ ಮೇಲುಗೈ ಸಾಧಿಸಿದರು. ವಾಲ್ವೆರ್ಡ್‌ಗೆ ಪ್ರತಿರೋಧ ತೋರಲು ಯಾವ ಹಂತದಲ್ಲೂ ಸಾಧ್ಯವಾಗಲಿಲ್ಲ.