ರವಿವಾರ, 19 ಜನವರಿ 2020
5:30 ಪೂರ್ವಾಹ್ನ
Daily PDF
10 ಲಕ್ಷ ಉದ್ಯೋಗ ಸೃಷ್ಟಿ : ಇ–ಕಾಮರ್ಸ್ನ ದೈತ್ಯ ಸಂಸ್ಥೆ ಅಮೆಜಾನ್ ಘೋಷಣೆ
Authored by:
Basavaraj Halli
ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿ 10 ಲಕ್ಷ ಹೊಸ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದಾಗಿ ವಿಶ್ವದ ಅತಿದೊಡ್ಡ ಆನ್‌ಲೈನ್ ಖರೀದಿ ತಾಣವಾಗಿರುವ ಅಮೆಜಾನ್ ಪ್ರಕಟಿಸಿದೆ.
‘ಐ.ಟಿ, ಕೌಶಲ ಅಭಿವೃದ್ಧಿ, ಮಾಹಿತಿ ಸೃಷ್ಟಿ, ರಿಟೇಲ್, ಸರಕು ಸಾಗಣೆ ಮತ್ತು ತಯಾರಿಕೆ ಕ್ಷೇತ್ರಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ 10 ಲಕ್ಷ ಹೊಸ ಉದ್ಯೋಗ ಸೃಷ್ಟಿಸಲು ಅಮೆಜಾನ್ ಯೋಜನೆ ಹಾಕಿಕೊಂಡಿದೆ’ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಜೆಫ್ ಬೆಜೊಸ್ ಹೇಳಿದ್ದಾರೆ