ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
8,00,000 ವರ್ಷಗಳ ಹಿಂದಿನ ಉಲ್ಕಾಶಿಲೆಯ ಕುಳಿ ಪತ್ತೆ
Authored by:
Basavaraj Halli
ಸುಮಾರು 7,90,000 ವರ್ಷಗಳ ಹಿಂದೆ ಬೃಹತ್ ಆಕಾಶಕಾಯವೊಂದು ಭೂಮಿಗೆ ಜೋರಾಗಿ ಅಪ್ಪಳಿಸಿತ್ತು. 1.2 ಮೈಲು ಮೀಟರ್ ಅಗಲವಾಗಿದ್ದ ಈ ಉಲ್ಕಾ ಶಿಲೆ ಅಪ್ಪಳಿಸಿದ ರಭಸಕ್ಕೆ ಭೂಮಿಯ ಶೇ 10ರಷ್ಟು ಮೇಲ್ಮೈಯುದ್ದಕ್ಕೂ ಶಿಲೆಯ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಹರಡಿತ್ತು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಗಾಜಿನ ಹನಿಗಳ ರೂಪದಲ್ಲಿರುವ ಗಾಜಿನ ಗೋಲಿ ಎಂದು ಕರೆಯಲಾಗುವ ಈ ಪುರಾತನ ಉಲ್ಕಾ ಶಿಲೆಯ ಅವಶೇಷಗಳನ್ನು ಏಷ್ಯಾ, ಆಸ್ಟ್ರೇಲಿಯಾ ಮತ್ತು ಅಂಟಾರ್ಟಿಕಾದಲ್ಲಿ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆದರೆ ಇದುವರೆಗೂ ವಿಜ್ಞಾನಿಗಳಿಗೆ ಆ ಉಲ್ಕಾ ಶಿಲೆ ಯಾವ ಭಾಗದಲ್ಲಿ ಅಪ್ಪಳಿಸಿತ್ತು ಎನ್ನುವುದನ್ನು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ. ಈ ಹುಡುಕಾಟ ಆರಂಭಿಸಿ ಒಂದು ಶತಮಾನವೇ ಉರುಳಿದೆ.