ಶುಕ್ರವಾರ, 17 ಜನವರಿ 2020
5:30 ಪೂರ್ವಾಹ್ನ
Daily PDF
ಇರಾನ್ ಜೊತೆ ಸ್ನೇಹ ಸಂಬಂಧ ಮುಂದುವರೆಸಲು ಬದ್ಧ : ಇರಾನ್ ಸಚಿವರಿಗೆ ಪ್ರಧಾನಿ ಮೋದಿ
Authored by:
Basavaraj Halli
ಇರಾನ್ ಸೇರಿದಂತೆ ಇತರ ಗಲ್ಫ್ ರಾಷ್ಟ್ರಗಳಲ್ಲಿ ಶಾಂತಿ,ಸುವ್ಯವಸ್ಥೆ ಕಾಪಾಡುವತ್ತ ಭಾರತ ಹೆಚ್ಚಿನ ಆಸಕ್ತಿ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಇರಾನ್ ವಿದೇಶಾಂಗ ಸಚಿವ ಮೊಹಮ್ಮದ್ ಜಾವದ್ ಜರೀಫ್ ಅವರನ್ನು ಭೇಟಿಯಾದ ಮೋದಿ, ಇರಾನ್ ಜೊತೆಗೆ ಸದೃಢ ಮತ್ತು ಸ್ನೇಹ ಸಂಬಂಧ ಮುಂದುವರಿಸಲು ಬದ್ಧವಾಗಿದೆ ಎಂದಿದ್ದಾರೆ.
ಈ ಕುರಿತು ಪ್ರಧಾನ ಮಂತ್ರಿಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ಇರಾನ್ ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಅಲ್ಲಿನ ವಿದೇಶಾಂಗ ಸಚಿವರು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ ಅವರು ಶಾಂತಿ ಕಾಪಾಡುವತ್ತ ಒತ್ತು ನೀಡಿದ್ದಾರೆ ಎಂದಿದೆ.