ವಿಶ್ವದ ಅತೀ ಎತ್ತರದ ಸರ್ದಾರ್​ ವಲ್ಲಭಬಾಯ್​ ಪಟೇಲ್​ ಅವರ ಪ್ರತಿಮೆ ಈಗ ವಿಶ್ವದ 8 ಅದ್ಭುತಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ರಾಷ್ಟ್ರದ ಮೊದಲ ಗೃಹ ಸಚಿವರಾದ ವಲ್ಲಭಬಾಯ್​ ಪಟೇಲ್​ ಅವರ 182 ಮೀಟರ್​ ಎತ್ತರದ ಪ್ರತಿಮೆಯನ್ನು ಶಾಂಘೈ ಸಹಕಾರ ಸಂಸ್ಥೆ ವಿಶ್ವದ 8 ಅದ್ಭುತಗಳ ಪಟ್ಟಿಗೆ ಸೇರಿಸಿದೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ತಿಳಿಸಿದ್ದಾರೆ.