ಬುಧವಾರ, 15 ಜನವರಿ 2020
5:30 ಪೂರ್ವಾಹ್ನ
Daily PDF
ಹಿರಿಯ ನಾಗರಿಕರಿಗೆ ಮನೆಯಲ್ಲೇ ಮತದಾನ ಮಾಡುವ ಅವಕಾಶ..!
Authored by:
Basavaraj Halli
ಶತಮಾನೋತ್ಸವದ ಅಂಚಿನಲ್ಲಿರುವ ಮತದಾರರಿಗೆ ಚುನಾವಣಾ ಇಲಾಖೆ ವಿಶೇಷ ಸೌಲಭ್ಯ ನೀಡಿದೆ. 100 ವರ್ಷದ ಆಸುಪಾಸಿರುವ ಮತದಾರರು ಚುನಾವಣೆಯಲ್ಲಿ ಮಹತ್ವದ ಪಾತ್ರವಹಿಸಲಿದ್ದಾರೆ. ವೃದ್ಧರು ಮನೆಯಲ್ಲೇ ಕುಳಿತು ಮತದಾನ ಮಾಡಬಹುದಾಗಿದೆ.
ಚುನಾವಣಾ ಅಧಿಕಾರಿ ಸ್ವತಃ ಅವರ ಮನೆಗೆ ಹೋಗುತ್ತಾರೆ. ಮನೆಯಲ್ಲೇ ಮತದಾನದ ಪ್ರಕ್ರಿಯೆ ನಡೆಯಲಿದೆ. ದೆಹಲಿ ದಕ್ಷಿಣ-ಪಶ್ಚಿಮ ಜಿಲ್ಲೆಯಲ್ಲಿ 100 ಮಂದಿ ಶತಮಾನೋತ್ಸವದ ಸಂಭ್ರಮದಲ್ಲಿದ್ದಾರೆ. ಒಂದು ವೇಳೆ ಆರೋಗ್ಯ ಸರಿಯಿರುವ ವೃದ್ಧರು ಮನೆಯಲ್ಲಿ ಮತ ಚಲಾಯಿಸುವ ಬದಲು ಕೇಂದ್ರಕ್ಕೆ ಬರುವ ಆಸಕ್ತಿ ಹೊಂದಿದ್ದರೆ ಅವ್ರು ಕೇಂದ್ರಕ್ಕೆ ಬಂದು ಮತ ಚಲಾಯಿಸಬಹುದು.
ವೃದ್ಧರು ಮತದಾನ ಕೇಂದ್ರಕ್ಕೆ ಬಂದ್ರೆ ಯುವಕರನ್ನು ಉತ್ತೇಜಿಸಿದಂತಾಗುತ್ತದೆ. ಆದರೆ ಕೇಂದ್ರಕ್ಕೆ ಬರಲು ಸಾಧ್ಯವಾಗದ ವೃದ್ಧರ ಮತವನ್ನು ಹಾಳು ಮಾಡುವಂತಿಲ್ಲ.ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ನೀಡಲಾಗುವುದು.