ರವಿವಾರ, 12 ಜನವರಿ 2020
5:30 ಪೂರ್ವಾಹ್ನ
Daily PDF
ಪ್ರಪಂಚದ ಅತಿ ವೇಗದ ಡ್ರೈವರ್‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದ ಚೀನಾ
Authored by:
Basavaraj Halli
ಚೀನಾ ದೇಶವು ಪ್ರಪಂಚದಲ್ಲಿಯೇ ಉದ್ದವಾದ ಬುಲೆಟ್ ರೈಲು ಮಾರ್ಗಗಳನ್ನು ಹೊಂದಿದೆ. ಚೀನಾದಲ್ಲಿರುವ ಬುಲೆಟ್ ರೈಲುಗಳು ಪ್ರತಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಚಲಿಸುತ್ತವೆ. ಚೀನಾದ ರಾಜಧಾನಿ ಬೀಜಿಂಗ್‍ನಿಂದ ಚೀನಾದ ಪ್ರಮುಖ ನಗರಗಳಿಗೆ ಬುಲೆಟ್ ರೈಲಿನ ಸೇವೆಯನ್ನು ಒದಗಿಸಲಾಗಿದೆ.
ಈಗ ಚೀನಾ ಬುಲೆಟ್ ರೈಲಿನ ಸೇವೆಯಲ್ಲಿ ಮತ್ತೊಂದು ಮೈಲಿಗಲ್ಲನ್ನು ಸಾಧಿಸಿದೆ. ಪ್ರಪಂಚದಲ್ಲಿಯೇ ಮೊದಲ ಬಾರಿಗೆ ಡ್ರೈವರ್‍ಲೆಸ್ ಬುಲೆಟ್ ರೈಲಿಗೆ ಚಾಲನೆ ನೀಡಿದೆ. ಚೀನಾದಲ್ಲಿ ಈಗಾಗಲೇ ಡ್ರೈವರ್‍ಲೆಸ್ ಮೆಟ್ರೋ ರೈಲುಗಳಿವೆ. ಆದರೆ ಮೆಟ್ರೊ ರೈಲುಗಳ ವೇಗವು ಕಡಿಮೆಯಾಗಿದೆ. ಡ್ರೈವರ್‍ಲೆಸ್ ಬುಲೆಟ್ ರೈಲುಗಳ ವೇಗವು ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ. ಈ ಡ್ರೈವರ್‍ಲೆಸ್ ಬುಲೆಟ್ ರೈಲಿನ ಸೇವೆಯನ್ನು ಬೀಜಿಂಗ್‍ನಿಂದ ಜಿಯಾನ್‍ಜಿಯಾವೊವರೆಗೂ ಆರಂಭಿಸಲಾಗಿದೆ.