ಶನಿವಾರ, 11 ಜನವರಿ 2020
5:30 ಪೂರ್ವಾಹ್ನ
Daily PDF
ISRO'ದಿಂದ ಬಾಹ್ಯಕಾಶದಲ್ಲಿ ಮತ್ತೊಂದು ಮೈಲಿಗಲ್ಲು : ಭೂಮಿಯ ಅದ್ಭುತ ಚಿತ್ರಗಳನ್ನು ಸೆರೆಹಿಡಿದ ಇಸ್ರೋನ ಕಾರ್ಟೊಸಾಟ್ -3 ಉಪಗ್ರಹ
Authored by:
Basavaraj Halli
ನವದೆಹಲಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸುಧಾರಿತ ಅರ್ಥ್ ಇಮೇಜಿಂಗ್ ಉಪಗ್ರಹವಾದ ಕಾರ್ಟೊಸಾಟ್ -3 ಅನ್ನು ಉಡಾವಣೆ ಮಾಡಿದ ಒಂದು ತಿಂಗಳ ನಂತರ, ಕೆಲವು ಅದ್ಭುತ ಚಿತ್ರಗಳನ್ನು ಸೆರೆಹಿಡಿದಿದೆ. ಇಸ್ರೋ ತನ್ನ ಅಧಿಕೃತವಾದ ಟ್ವಿಟರ್ ಪೇಜ್‌ನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಗಳು ಕತಾರ್‌ನದ್ದಾಗಿದ್ದಾವೆ.
'ಕಾರ್ಟೊಸಾಟ್ -3 ನಿಂದ ಗಮನಿಸಿದಂತೆ ಕತಾರ್ ಪ್ರದೇಶವನ್ನು ಒಳಗೊಂಡ ಹೈ-ರೆಸಲ್ಯೂಷನ್ ಪಂಚ್ರೊಮ್ಯಾಟಿಕ್ ಮತ್ತು ಮಲ್ಟಿ-ಸ್ಪೆಕ್ಟ್ರಲ್ ಇಮೇಜಸ್' ಅನ್ನು ಹೊಂದಿದೆ. ಮೂರನೇ ತಲೆಮಾರಿನ ಉಪಗ್ರಹವಾಗಿರುವ ಕಾರ್ಟೋಸ್ಯಾಟ್-3 ಅರ್ಥ್ ಇಮೇಜಿಂಗ್ ಮತ್ತು ಮ್ಯಾಪಿಂಗ್ನ ಕಾರ್ಯ ನಿರ್ವಹಿಸುತ್ತದೆ. ಭೂವೀಕ್ಷಣೆಯ ಉಪಗ್ರಹವಾದ ಇದು ಅತ್ಯುನ್ನತ ರೆಸಲ್ಯೂಷನ್ನ ಫೋಟೋ ತಂತ್ರಜ್ಞಾನ ಹೊಂದಿದೆ. ಅತ್ಯುತ್ತಮ ರೆಸಲ್ಯೂಷನ್ ಹೊಂದಿರುವ ಭೂಮಿಯ ಚಿತ್ರಗಳನ್ನು ಇದು ಕ್ಲಿಕ್ಕಿಸಬಲ್ಲುದು.