ಗುರುವಾರ, 09 ಜನವರಿ 2020
5:30 ಪೂರ್ವಾಹ್ನ
Daily PDF
ಜಿಯೊ: ಉಚಿತ ವೈಫೈ ಕರೆ ಸೇವೆಗೆ ಚಾಲನೆ
Authored by:
Basavaraj Halli
ಬೆಂಗಳೂರು: ಮೊಬೈಲ್ ಸೇವಾ ಕಂಪನಿ ರಿಲಯನ್ಸ್ ಜಿಯೊ, ವೈ– ಫೈ ಆಧರಿಸಿದ ಉಚಿತ ಧ್ವನಿ ಮತ್ತು ವಿಡಿಯೊ ಕರೆ ಮಾಡುವ ಸೇವೆಗೆ ಚಾಲನೆ ನೀಡಿದೆ.
ಮೊಬೈಲ್ ಬಳಕೆದಾರರು ‘ಎಲ್‌ಟಿಇ’ನಿಂದ ‘ವೈ–ಫೈ’ ಆಧರಿಸಿದ ಕರೆ ಮಾಡಲು ಇದರಿಂದ ಸಾಧ್ಯವಾಗಲಿದೆ. ಗ್ರಾಹಕರು ಜಿಯೊ ವೈಫೈ ಕರೆ ಮಾಡಲು ಯಾವುದೇ ವೈ-ಫೈ ಸಂಪರ್ಕ ಜಾಲವನ್ನೂ ಬಳಸಬಹುದು. ಧ್ವನಿ ಮತ್ತು ವಿಡಿಯೊ ಕರೆಗಳು VoLTE ಮತ್ತು Wi-Fi ನಡುವೆ ಬದಲಾಗಲಿವೆ. ಜಿಯೋ ವೈ-ಫೈ ಕರೆ ಚಾಲನೆಗೊಳಿಸಲು, Jio.com/wificalling ನಲ್ಲಿ ವಿವರಗಳಿವೆ. ಇದೇ 16ರ ಒಳಗೆ ದೇಶದಾದ್ಯಂತ ಈ ಸೇವೆ ವಿಸ್ತರಣೆಯಾಗಲಿದೆ ಎಂದು ಕಂಪನಿ ತಿಳಿಸಿದೆ.
Source: ಪ್ರಜಾವಾಣಿ ವಾರ್ತೆ