ಗುರುವಾರ, 09 ಜನವರಿ 2020
5:30 ಪೂರ್ವಾಹ್ನ
Daily PDF
2022ರಲ್ಲಿ ನೂತನ ಕಟ್ಟಡದಲ್ಲಿ ಸಂಸತ್ ಅಧಿವೇಶನ: ಲೋಕಸಭೆ ಸ್ಪೀಕರ್ ಓಂ ಬಿರ್ಲಾ
Authored by:
Basavaraj Halli
2022 ರಲ್ಲಿ ದೇಶದ 75 ನೇ`ಸ್ವಾತಂತ್ರೋತ್ಸವ ವರ್ಷವನ್ನಾಚರಿಸಲಿದೆ. ಆ ಸಮಯದಲ್ಲಿ ಅಂದಿನ ಸಾಂಸತ್ ಅಧಿವೇಶನವು ಹೊಸ ಕಟ್ಟಡದಲ್ಲಿ ನಡೆಯಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
"... 'ನವ ಭಾರತ'ದ ಕನಸನ್ನು ಈಡೇರಿಸಲು.ಭಾರತ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವದ ನೆನಪಿಗಾಗಿ ಭಾರತೀಯ ಸಂಸತ್ತು ಅಧಿವೇಶನವು 2022 ರಲ್ಲಿ ಹೊಸ ಸಂಸತ್ ಭವನದಲ್ಲಿ ನಡೆಯಲಿದೆ" ಎಂದು ಬಿರ್ಲಾ ಹೇಳಿದ್ದಾರೆ. ಕೆನಡಾದ ಒಟ್ಟಾವಾದಲ್ಲಿ ನಡೆದ 25 ನೇ ಕಾಮನ್ವೆಲ್ತ್ ಸ್ಪೀಕರ್ ಮತ್ತು ಅಧ್ಯಕ್ಷರ ಸಮ್ಮೇಳನದಲ್ಲಿ ಅವರು ಮಾತನಾಡಿದರು.
1927ರಲ್ಲಿ ನಿರ್ಮಾಣಗೊಂಡ ಪ್ರಸ್ತುತ ಸಂಸತ್ ಭವನವು 92 ವಸಂತಗಳನ್ನು ಕಂಡಿದೆ. ಆದರೆ ಲೋಕಸಭಾ ಸಚಿವಾಲಯ ಹೊರಡಿಸಿದ ಹೇಳಿಕೆಯಲ್ಲಿ ಸಂಸತ್ತಿನ ಸದಸ್ಯರು ಮತ್ತು ಸಿಬ್ಬಂದಿಗೆ ಸಾಕಷ್ಟು ಸ್ಥಳ ಮತ್ತು ಸೌಲಭ್ಯಗಳನ್ನು ಒದಗಿಸುವ ತುರ್ತು ಅವಶ್ಯಕತೆಯಿದೆ, ನವ ಭಾರತದ ಕನಸನ್ನು ನನಸಾಗಿಸಲು ನೂತನ ಸಂಸತ್ ಭವನ ನಿರ್ಮಾಣ ತುರ್ತಾಗಿ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.