ರವಿವಾರ, 05 ಜನವರಿ 2020
5:30 ಪೂರ್ವಾಹ್ನ
Daily PDF
ಝಕೀರ ನದಾಫಗೆ ನಾಟಕ ಅಕಾಡೆಮಿಯ ರಂಗ ಪ್ರಶಸ್ತಿ
Authored by:
Basavaraj Halli
ಬೆಳಗಾವಿ: ಜಿಲ್ಲೆಯ ಸವದತ್ತಿಯ ನಾಟಕಕಾರ ಝಕೀರ ನದಾಫ ಅವರಿಗೆ ನಾಟಕ ಅಕಾಡೆಮಿಯ 2019-20ನೇ ಸಾಲಿನ ರಂಗ ಪ್ರಶಸ್ತಿ ಲಭಿಸಿದೆ.
ಕಳೆದ 23 ವರ್ಷಗಳಿಂದ ಸವದತ್ತಿಯಲ್ಲಿ ಪ್ರತಿವರ್ಷ 9 ದಿನಗಳ 'ಪರಸಗಡ ನಾಟಕೋತ್ಸವ'ವನ್ನು ಆಯೋಜಿಸಿಕೊಂಡು ಬಂದಿದ್ದಾರೆ. ಇದಲ್ಲದೇ, ಹತ್ತು ಹಲವು ನಾಟಕಗಳನ್ನು ರಚಿಸಿ, ನಿರ್ದೇಶಿಸಿದ್ದಾರೆ. ಕೆಲವು ನಾಟಕಗಳಲ್ಲದೇ, ದೂರದರ್ಶನದ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ. ಭಕ್ತಿ ಗೀತೆಗಳ ಧ್ವನಿ ಸುರುಳಿಗಳನ್ನು ಬಿಡುಗಡೆ ಮಾಡಿದ್ದಾರೆ.