➤ ಸಭೆಯ ಪ್ರಮುಖ ನಿರ್ಣಯಗಳು ಮತ್ತು ಚರ್ಚಿತ ವಿಷಯಗಳು:
1. ಗಡಿ ಅಪರಾಧಗಳ ತಡೆಗೆ 'ಶೂನ್ಯ ಸಹಿಷ್ಣುತೆ' (Zero Tolerance): ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಸವಾಲಾಗಿರುವ ಮಾದಕ ದ್ರವ್ಯ ಸಾಗಣೆ (Narcotics), ಶಸ್ತ್ರಾಸ್ತ್ರಗಳ ಕಳ್ಳಸಾಗಣೆ, ನಕಲಿ ನೋಟು ದಂಧೆ (FICN), ಚಿನ್ನದ ಕಳ್ಳಸಾಗಣೆ ಮತ್ತು ಮಾನವ ರೇಫಿಕಿಂಗ್ (Human Trafficking) ನಂತಹ ಗಡಿಯಾಚೆಗಿನ ಅಪರಾಧಗಳನ್ನು ತಡೆಯಲು ಉಭಯ ಪಡೆಗಳು 'ಶೂನ್ಯ ಸಹಿಷ್ಣುತೆ' ನೀತಿಯನ್ನು ಅಳವಡಿಸಿಕೊಳ್ಳಲು ಒಪ್ಪಿಕೊಂಡಿವೆ.
2. ಅಕ್ರಮ ನುಸುಳುವಿಕೆ ಮತ್ತು ಬಲವಂತದ ಗಡಿ ದಾಟುವಿಕೆ (Illegal & Forced Border Crossings):
- ಭಾರತಕ್ಕೆ ಬಾಂಗ್ಲಾದೇಶಿ ಪ್ರಜೆಗಳು ಹಾಗೂ ರೋಹಿಂಗ್ಯಾ ನಿರಾಶ್ರಿತರ ಅಕ್ರಮ ವಲಸೆಯನ್ನು ತಡೆಯುವ ಕುರಿತು ಬಿಎಸ್‌ಎಫ್ ಕಳವಳ ವ್ಯಕ್ತಪಡಿಸಿದೆ.
- ಇತ್ತೀಚೆಗೆ ಗಡಿಯಲ್ಲಿ ನಡೆಯುತ್ತಿರುವ ಬಲವಂತದ ನುಸುಳುವಿಕೆ (Push-ins/Push-backs) ಹಾಗೂ ಕಾನೂನುಬಾಹಿರ ಗಡಿ ದಾಟುವಿಕೆ ಪ್ರಕರಣಗಳನ್ನು ದ್ವಿಪಕ್ಷೀಯ ರಾಜತಾಂತ್ರಿಕ ನಿಯಮಾವಳಿಗಳ ಪ್ರಕಾರವೇ ಬಗೆಹರಿಸಲು ತೀರ್ಮಾನಿಸಲಾಯಿತು.
- ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ವಲಸಿಗರ ರಾಷ್ಟ್ರೀಯತೆ ಪರಿಶೀಲನೆ (Nationality Verification) ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ಅವರ ಸುರಕ್ಷಿತ ಸ್ವದೇಶ ವಾಪಸಾತಿ (Repatriation) ಪ್ರಕ್ರಿಯೆಗೆ ಒತ್ತು ನೀಡಲು ಚರ್ಚಿಸಲಾಯಿತು.
4. ಗಡಿ ಮೂಲಸೌಕರ್ಯ ಅಭಿವೃದ್ಧಿ (Border Infrastructure): ಗಡಿ ಬೇಲಿ ನಿರ್ಮಾಣ, ಹಗಲು-ರಾತ್ರಿ ಕಣ್ಗಾವಲು ವ್ಯವಸ್ಥೆಗಳ ಅಳವಡಿಕೆ ಹಾಗೂ 'ಸಮನ್ವಯ ಗಡಿ ನಿರ್ವಹಣಾ ಯೋಜನೆ'ಯನ್ನು (CBMP) ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬಗ್ಗೆ ಜೂನ್ 11 ರಂದು ನಡೆದ ಉಭಯ ದೇಶಗಳ ಜಂಟಿ ಚರ್ಚೆಯ ದಾಖಲೆಗಳಿಗೆ (Joint Record of Discussions) ಸಹಿ ಹಾಕಲಾಯಿತು.