* ಕೇಂದ್ರ ಗೃಹ ಸಚಿವರು ಮತ್ತು ಸಹಕಾರ ಸಚಿವರಾದ ಅಮಿತ್ ಶಾ ಅವರು ಆಗಸ್ಟ್ 4 ರಂದು ಚಂಡೀಗಢದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನುಗಳಿಗಾಗಿ ಇ-ಸಕ್ಷ್ಯ, ನ್ಯಾಯ ಸೇತು, ನ್ಯಾಯ ಶ್ರುತಿ ಮತ್ತು ಇ-ಸಮ್ಮನ್ ಅಪ್ಲಿಕೇಶನ್‌ಗಳನ್ನು ಬಿಡುಗಡೆ ಮಾಡಿದರು.
* ಹೊಸ ಮೂರು ಅಪರಾಧ ಕಾನೂನುಗಳು ಸಮಾಜದ ಎಲ್ಲ ಜನರಿಗೆ ನ್ಯಾಯ ನೀಡುವುದಾಗಿದೆ. ಯಾವುದೇ ವ್ಯಕ್ತಿಗೆ ಶಿಕ್ಷಿಸಲು ಜಾರಿ ಮಾಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೊಸ ಕಾನೂನುಗಳನ್ನು ಸಮರ್ಥಿಸಿಕೊಂಡಿದ್ದಾರೆ.
* ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್ಎಸ್ಎಸ್) ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ (ಬಿಎಸ್ಎ)ಗಳು ಭಾರತೀಯರು ಆಯ್ಕೆ ಮಾಡಿಕೊಂಡ ಕಾನೂನುಗಳಾಗಿವೆ.
* ಪ್ರತಿಯೊಬ್ಬ ವ್ಯಕ್ತಿಗೂ ನ್ಯಾಯ ನೀಡುವುದು ಸಂವಿಧಾನದ ಜವಾಬ್ದಾರಿಯಾಗಿದ್ದು, ಸಂವಿಧಾನದ ಈ ಆಶಯವನ್ನು ವಾಸ್ತವಕ್ಕೆ ತರಲು ನಮ್ಮ ಅಪರಾಧ ನ್ಯಾಯ ವ್ಯವಸ್ಥೆಯೇ ಸಾಧನವಾಗಿದೆ ಎಂದು ಹೇಳಿದರು.
* ರೆಕಾರ್ಡಿಂಗ್ ಪೂರ್ಣಗೊಂಡ ನಂತರ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿ ಸಾಕ್ಷ್ಯ ಲಾಕರ್‌ಗೆ ರವಾನಿಸಲಾಗುತ್ತದೆ ಮತ್ತು ಚಾರ್ಜ್ ಶೀಟ್‌ಗೆ ಲಿಂಕ್ ಮಾಡಲಾಗುತ್ತದೆ.
* ಈ ರೆಕಾರ್ಡಿಂಗ್‌ಗಳು ಮತ್ತು ಛಾಯಾಚಿತ್ರಗಳನ್ನು ಪ್ರಾಸಿಕ್ಯೂಟರ್‌ಗಳು ಮತ್ತು ಡಿಫೆನ್ಸ್ ವಕೀಲರು ಬಳಸಲು ಡೌನ್‌ಲೋಡ್ ಮಾಡಬಹುದು. ವಿದ್ಯುನ್ಮಾನವಾಗಿ ನ್ಯಾಯಾಲಯಕ್ಕೆ ಲಭ್ಯವಾಗುವಂತೆ ಮಾಡಲಾಗುತ್ತದೆ.
ಮಂಗಳವಾರ, 06 ಆಗಸ್ಟ್ 2024
3:59 ಅಪರಾಹ್ನ
Daily PDF
ಚಂಡೀಗಢದಲ್ಲಿ ಮೂರು ಹೊಸ ಕ್ರಿಮಿನಲ್ ಕಾನೂನು ಇ-ಸಕ್ಷ್ಯ, ನ್ಯಾಯ ಸೇತು, ನ್ಯಾಯ ಶ್ರುತಿ ಮತ್ತು ಇ-ಸಮ್ಮನ್ ಅಪ್ಲಿಕೇಶನ್ ಪ್ರಾರಂಭ
Authored by:
Bhagya R K