* ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಅವರು ಛತ್ರಪತಿ ಶಿವಾಜಿ ಮಹಾರಾಜರ ಅಪ್ರತಿಮ ಹುಲಿ ಪಂಜವನ್ನು ಭಾರತಕ್ಕೆ ಮರಳಿಸಲು ಅಕ್ಟೋಬರ್ 3 ರಂದು ಲಂಡನ್‌ನಲ್ಲಿ ಬ್ರಿಟನ್ಸ್ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ತಿಳುವಳಿಕೆ ಪತ್ರಕ್ಕೆ ಸಹಿ ಹಾಕಲಿದ್ದಾರೆ.
* ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕ ವರ್ಷದಲ್ಲಿ ಭಾರತಕ್ಕೆ ಛತ್ರಪತಿ ಶಿವಾಜಿ ಪ್ರಿಯರಿಗೆ ವಾಘ ನಖ್ ಎಂಬ ಹುಲಿ ಪಂಜವನ್ನು ಮರಳಿ ತರಲು ಒಪ್ಪಂದಕ್ಕೆ ಸಹಿ ಹಾಕಲು ಲಂಡನ್‌ಗೆ ತೆರಳಲಿದ್ದಾರೆ.
* 17 ನೇ ಶತಮಾನದ ಮರಾಠ ರಾಜ ಛತ್ರಪತಿ ಶಿವಾಜಿ ಮಹಾರಾಜರು ಬಿಜಾಪುರ ಆದಿಲ್ ಶಾಹಿ ಸಾಮ್ರಾಜ್ಯದಲ್ಲಿ ಜನರಲ್ ಆಗಿದ್ದ ಅಫ್ಜಲ್ ಖಾನ್ ನನ್ನು ಕೊಲ್ಲಲು 'ಹುಲಿಯ ಪಂಜ' (ವಾಘ ನಖ್) ಅಥವಾ ಹುಲಿ ಉಗುರುಗಳನ್ನು ಬಳಸಿದರು.
* ವಾಘ ನಖ್ ಅನ್ನು ಆಯುಧವನ್ನು ಸತಾರಾದಲ್ಲಿರುವ ಶ್ರೀ ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯಂ, ನಾಗ್ಪುರದ ಸೆಂಟ್ರಲ್ ಮ್ಯೂಸಿಯಂ, ಕೊಲ್ಲಾಪುರ ಮತ್ತು ಮುಂಬೈನಲ್ಲಿ ಪ್ರದರ್ಶಿಸಲು ನಿರ್ಧರಿಸಲಾಗಿದೆ.
* ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿ ಆಳ್ವಿಕೆ ಅವಧಿಯ 1818 ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ 'ಹುಲಿಯ ಪಂಜ' ಬ್ರಿಟನ್ ವಸ್ತುಸಂಗ್ರಹಾಲಯವನ್ನು ಸೇರಿತ್ತು.
ಮಂಗಳವಾರ, 03 ಅಕ್ಟೋಬರ್ 2023
11:01 ಪೂರ್ವಾಹ್ನ
Daily PDF
ಛತ್ರಪತಿ ಶಿವಾಜಿ ಮಹಾರಾಜರ 'ಹುಲಿಯ ಪಂಜ' ಭಾರತಕ್ಕೆ ಮರಳಿಸುವ ಒಪ್ಪಂದ
Authored by:
Yallamma G