* ನಾಲ್ಕು ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ (ಟೆನಿಸ್) ಎರಡನೇ ಶ್ರೇಯಾಂಕದ ಸ್ಪೇನ್‌ನ ಕಾರ್ಲೋಸ್ ಅಲ್ಕರಾಜ್ ಅವರು ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂ.1 ಜಾನಿಕ್ ಸಿನ್ನರ್ ಅವರನ್ನು 6-7 (6), 6-4, 7-6 (3) ಸೆಟ್‌ಗಳಿಂದ ಸೋಲಿಸಿ, ತಮ್ಮ ಮೊದಲ ಚೀನಾ ಓಪನ್ ಪ್ರಶಸ್ತಿಯನ್ನು ಪಡೆದರು.
* ಅಲ್ಕಾರಾಜ್ ಸರಣಿಯ ಇತಿಹಾಸದಲ್ಲಿ (2009 ರಿಂದ) ಎಲ್ಲಾ ಮೂರು ಮೇಲ್ಮೈಗಳಲ್ಲಿ (ಹಾರ್ಡ್, ಗ್ರಾಸ್ ಮತ್ತು ಕ್ಲೇ ಕೋರ್ಟ್‌ಗಳಲ್ಲಿ) ATP 500 ಪ್ರಶಸ್ತಿಗಳನ್ನು ಪಡೆದ ಮೊದಲ ಆಟಗಾರರಾಗಿದ್ದಾರೆ.
* ಎರಡನೇ ಶ್ರೇಯಾಂಕದ ಕಾರ್ಲೊಸ್ ಅಲ್ಕರಾಜ್ ಅವರು ಚೀನಾ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಸ್ಪೇನ್ ಆಟಗಾರ ಅಲ್ಕರಾಜ್ ಅವರು ವರ್ಷದ ನಾಲ್ಕನೇ ATP ಕಿರೀಟ ಮತ್ತು ಒಟ್ಟಾರೆ 16 ನೇ ಕಿರೀಟವನ್ನು ಗೆದ್ದುಕೊಂಡಿದ್ದಾರೆ.
* ಚೀನಾದ ಜೆಂಗ್ ಕ್ವಿನ್ವೆನ್ ಅವರು ಅಮೆರಿಕದ ಅಮಂಡಾ ಅನಿಸಿಮೊವಾ ಅವರನ್ನು ಸೋಲಿಸಿ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಅರೀನಾ ಸಬಲೆಂಕಾ ಅವರು ಅಮೆರಿಕದ ಮ್ಯಾಡಿಸನ್ ಕೀಸ್ ಅವರನ್ನು ಸೋಲಿಸುವ ಮೂಲಕ ಕ್ವಾರ್ಟರ್ ಫೈನಲ್‌ನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡರು. ಸಬಲೆಂಕಾ ಅವರು ಜೆಕ್ ಗಣರಾಜ್ಯದ ಕರೋಲಿನಾ ಮುಚೋವಾ ಅವರನ್ನು ಎದುರಿಸಲಿದ್ದಾರೆ.
China Open 2024:- ಚೀನಾ ಓಪನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕಾರ್ಲೋಸ್ ಅಲ್ಕರಾಜ್
Published by Yallamma G
03 ಅಕ್ಟೋಬರ್ 2024