➤ ಸೆಮಿಕಾನ್ 2.0 : ಭಾರತವನ್ನು ಜಾಗತಿಕ ಸೆಮಿಕಂಡಕ್ಟರ್ ಮ್ಯಾಪ್‌ನಲ್ಲಿ ಪ್ರಮುಖ ಸ್ಥಾನದಲ್ಲಿ ನಿಲ್ಲಿಸುವ ಮತ್ತು ದೇಶೀಯವಾಗಿ ಚಿಪ್ ಉತ್ಪಾದನೆಗೆ ದೀರ್ಘಕಾಲೀನ ನೀತಿ ಬೆಂಬಲವನ್ನು ನೀಡುವ ಉದ್ದೇಶದಿಂದ ಈ ಎರಡನೇ ಆವೃತ್ತಿಯನ್ನು ಜಾರಿಗೆ ತರಲಾಗಿದೆ. ಇದು ಈ ಹಿಂದೆ ಯಶಸ್ವಿಯಾಗಿದ್ದ 'ಸೆಮಿಕಾನ್ 1.0' ರ ಮುಂದುವರಿದ ಭಾಗವಾಗಿದೆ.
➤ ಸೆಮಿಕಾನ್ 2.0 ನ ಪ್ರಮುಖ ಆರು ಸ್ತಂಭಗಳು:
- ಚಿಪ್ ವಿನ್ಯಾಸ (Design): ಭಾರತೀಯ ಸ್ಟಾರ್ಟ್-ಅಪ್‌ಗಳು ಸ್ವಂತ ಐಪಿ (Intellectual Properties) ಮತ್ತು ಚಿಪ್ ವಿನ್ಯಾಸಗಳನ್ನು ಅಭಿವೃದ್ಧಿಪಡಿಸಲು ಪ್ರೋತ್ಸಾಹಿಸಲಾಗುತ್ತದೆ. ಈಗಾಗಲೇ 105 ಕ್ಕೂ ಹೆಚ್ಚು ಸ್ಟಾರ್ಟ್-ಅಪ್‌ಗಳು ಈ ಕೆಲಸದಲ್ಲಿ ತೊಡಗಿಕೊಂಡಿವೆ.
- ಯಂತ್ರೋಪಕರಣಗಳು ಮತ್ತು ಕಚ್ಚಾ ವಸ್ತುಗಳು (Machines & Materials): ಚಿಪ್ ತಯಾರಿಕೆಗೆ ಬೇಕಾಗುವ ವಿಶೇಷ ಅನಿಲಗಳು, ರಸಾಯನಿಕಗಳು ಮತ್ತು ಯಂತ್ರೋಪಕರಣಗಳನ್ನು ತಯಾರಿಸುವ ಕಂಪನಿಗಳಿಗೆ ಪ್ರೋತ್ಸಾಹಧನ (Incentives) ನೀಡಲಾಗುತ್ತದೆ.
- ಹೆಚ್ಚಿನ ಫ್ಯಾಬ್‌ಗಳ ಸ್ಥಾಪನೆ (Setting up more Fabs): ಸಿಲಿಕಾನ್ ಫ್ಯಾಬ್ಸ್, ಡಿಸ್ಪ್ಲೇ ಫ್ಯಾಬ್ಸ್ ಮತ್ತು ಕಾಂಪೌಂಡ್ ಸೆಮಿಕಂಡಕ್ಟರ್ ಸ್ಥಾಪನೆಗೆ ಜಾಗತಿಕ ಹೂಡಿಕೆಯನ್ನು ಆಕರ್ಷಿಸುವುದು. ಭಾರತದ ಮೊದಲ ಫ್ಯಾಬ್ 2028 ರಲ್ಲಿ ಕಾರ್ಯಾರಂಭ ಮಾಡಲಿದೆ.
- ATMP ಮತ್ತು OSAT ವ್ಯವಸ್ಥೆ ಬಲಪಡಿಸುವುದು: ಚಿಪ್ ಪ್ಯಾಕೇಜಿಂಗ್ ಮತ್ತು ಪರೀಕ್ಷಾ ವ್ಯವಸ್ಥೆಯನ್ನು (Assembly, Testing, Marking and Packaging) ಮತ್ತಷ್ಟು ಆಧುನೀಕರಿಸುವುದು.
- ಸಂಶೋಧನೆ ಮತ್ತು ಅಭಿವೃದ್ಧಿ (R&D): ಅತ್ಯಾಧುನಿಕ ನ್ಯಾನೋಮೀಟರ್ (28nm ನಿಂದ 110nm ಗಿಂತಲೂ ಸುಧಾರಿತ) ತಂತ್ರಜ್ಞಾನಗಳ ಅಭಿವೃದ್ಧಿಗೆ ಜಾಗತಿಕ ಸಂಶೋಧನಾ ಸಂಸ್ಥೆಗಳೊಂದಿಗೆ ಸಹಭಾಗಿತ್ವ.
- ಪ್ರತಿಭಾ ವಿಕಸನ (Talent Development): ದೇಶದ 315 ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಸುಧಾರಿತ ಇಡಿಎ (EDA) ಪರಿಕರಗಳನ್ನು ಬಳಸಿ ತರಬೇತಿ ನೀಡುವುದು. ಈಗಾಗಲೇ 68,000 ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ.
- ಹೂಡಿಕೆ: ಸೆಮಿಕಾನ್ 1.0 ಅಡಿಯಲ್ಲಿ ಒಟ್ಟು ರೂ. 1.64 ಲಕ್ಷ ಕೋಟಿಗಿಂತಲೂ ಹೆಚ್ಚಿನ ಹೂಡಿಕೆಯೊಂದಿಗೆ 12 ಉತ್ಪಾದನಾ ಘಟಕಗಳಿಗೆ ಅನುಮೋದನೆ ನೀಡಲಾಗಿದೆ.
- ಪ್ರಮುಖ ಸಂಸ್ಥೆಗಳು: ಮೈಕ್ರಾನ್ (Micron), ಕೇನ್ಸ್ (Kaynes) ಮತ್ತು ಸಿಜಿ ಸೆಮಿ (CG Semi) ಸಂಸ್ಥೆಗಳು ಈಗಾಗಲೇ ವಾಣಿಜ್ಯ ಉತ್ಪಾದನೆಯನ್ನು ಪ್ರಾರಂಭಿಸಿವೆ.
- ವಿನ್ಯಾಸ ವಲಯ: ಸ್ಟಾರ್ಟ್-ಅಪ್ ಮತ್ತು ಎಂಎಸ್ಎಂಇಗಳ ಒಟ್ಟು 24 ಸೆಮಿಕಂಡಕ್ಟರ್ ವಿನ್ಯಾಸ ಯೋಜನೆಗಳಿಗೆ ಹಣಕಾಸಿನ ನೆರವು ನೀಡಲಾಗಿದೆ.