* ಕನ್ನಡ ಲೇಖಕಿ ಬಾನು ಮುಷ್ತಾಕ್ ಅವರ ಕಥಾ ಸಂಕಲನ ‘ಹಾರ್ಟ್ ಲ್ಯಾಂಪ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಕಿರುಪಟ್ಟಿಯಲ್ಲಿ ಸ್ಥಾನಪಡೆದು ಇತಿಹಾಸ ನಿರ್ಮಿಸಿದೆ.
* ಇದು ಬೂಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಕನ್ನಡ ಭಾಷೆಯ ಪುಸ್ತಕವಾಗಿದ್ದು, ಮಂಗಳವಾರ (ಏಪ್ರಿಲ್ 8, 2025) ಈ ಬೆಳವಣಿಗೆಯು ಅಧಿಕೃತವಾಗಿ ಘೋಷಿಸಲಾಯಿತು. 'ಹಾರ್ಟ್ ಲ್ಯಾಂಪ್' ನು ದೀಪಾ ಭಸ್ತಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
* ಈ ಸಂಕಲನವು 1990 ರಿಂದ 2023 ರ ನಡುವೆ ಬಾನು ಮುಷ್ತಾಕ್ ಬರೆದ 12 ಸಣ್ಣ ಕಥೆಗಳ ಆಯ್ಕೆಯಾಗಿದೆ. ಇತ್ತೀಚೆಗೆ ಇವರ ಮತ್ತೊಂದು ಕಥಾ ಸಂಕಲನ 'ಹಸೀನಾ ಮತ್ತು ಅದರ್ ಸ್ಟೋರೀಸ್' ಕೂಡ ದೀಪಾ ಭಸ್ತಿಯವರ ಅನುವಾದದ ಮೂಲಕ 2024 ರ ಇಂಗ್ಲಿಷ್ ಪೆನ್ ಅನುವಾದ ಪ್ರಶಸ್ತಿಯನ್ನು ಗೆದ್ದಿತ್ತು.
* ಕರ್ನಾಟಕ ಮೂಲದ ಬರಹಗಾರ್ತಿ, ವಕೀಲೆ ಮತ್ತು ಕಾರ್ಯಕರ್ತೆ ಬಾನು ಮುಷ್ತಾಕ್ ಬರೆದ ಈ ಪುಸ್ತಕವು ದಕ್ಷಿಣ ಭಾರತದ ಮುಸ್ಲಿಂ ಮಹಿಳೆಯರ ಜೀವನವನ್ನು ಆಳವಾಗಿ ಚಿತ್ರಿಸುತ್ತದೆ.
* ಪ್ರತಿಷ್ಠಿತ ಪುರಸ್ಕಾರಗಳತ್ತ ಕನ್ನಡ ಸಾಹಿತ್ಯ ಸಾಗುತ್ತಿರುವುದು ಎಲ್ಲ ಬರಹಗಾರರಿಗೆ ಸ್ಫೂರ್ತಿದಾಯಕವಾಗಿದೆ.
* ಲೇಖಕಿ ಮುಷ್ತಾಕ್ ತಮ್ಮ ಲೇಖನಗಳಿಗೆ ಪ್ರೇರಣೆಯಾಗಿ ದಿನನಿತ್ಯದ ಘಟನೆಗಳು ಮತ್ತು ವೈಯಕ್ತಿಕ ಅನುಭವಗಳನ್ನು ಉಲ್ಲೇಖಿಸುತ್ತಾ, “ನನ್ನ ಹೃದಯವೇ ನನ್ನ ಅಧ್ಯಯನ ಕ್ಷೇತ್ರ” ಎಂಬುದಾಗಿ ತಿಳಿಸಿದ್ದಾರೆ.
ಬೂಕರ್ ಕಿರುಪಟ್ಟಿಯಲ್ಲಿ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಪುಸ್ತಕ
Published by Jyoti Angadi
09 ಏಪ್ರಿಲ್ 2025