* ವೃತ್ತಾಕಾರದ ಕೇಸರಿ ಬಣ್ಣದಲ್ಲಿ ಭಾರತದ ನಕಾಶೆ ಇದೆ. ಟಿಲಿಕಾಂ ತರಂಗಗಳು ಸುತ್ತುವರಿದಿರುವಂತೆ ಎರಡು ಬಾಣದ ಗುರುತುಗಳಿದ್ದು, ಅದರಲ್ಲಿ ಒಂದು ಬಿಳಿ ಬಣ್ಣ, ಮತ್ತೊಂದು ಹಸಿರು ಬಣ್ಣದಲ್ಲಿದೆ. ಒಟ್ಟಾರೆ ಈ ಮೂರ ಬಣ್ಣಗಳು ರಾಷ್ಟ್ರಧ್ವಜವನ್ನು ಪ್ರತಿನಿಧಿಸುವಂತೆ ಲೋಗೋ ವಿನ್ಯಾಸ ಮಾಡಲಾಗಿದೆ.
* ಈ ಹೊಸ ಲೋಗೋದಲ್ಲಿ ದೇಶ ಐಕ್ಯತೆ ಸಾರುವ ಭಾರತದ ತ್ರಿವರ್ಣ ಧ್ವಜದ ಮೂರು ಬಣ್ಣಗಳಿವೆ. ಬಿಎಸ್‌ಎನ್‌ಎಲ್ ಕನೆಕ್ಟಿಂಗ್ ಪೀಪಲ್ ಹಾಗೇ ಉಳಿಸಿಕೊಳ್ಳಲಾಗಿದೆ. ಅದರೊಂದಿಗೆ 'ಸುರಕ್ಷಿತ, ವಿಶ್ವಾಸಾರ್ಹ, ಕೈಗೆಟುಕುವ' ಘೋಷವಾಕ್ಯದೊಂದಿಗೆ ಹೊಸ ವಿನ್ಯಾಸದಲ್ಲಿ ಕಂಗೊಳಿಸುತ್ತಿದೆ.
* ಟಾಟಾ ಸಮೂಹದ ಜೊತೆಗೆ 1500 ಕೋಟಿ ರೂಪಾಯಿ ಒಪ್ಪಂದದ ಬಳಿಕ ಬಿಎಸ್‌ಎನ್‌ಎಲ್ ಶರವೇಗದಲ್ಲಿ ಮೇಲ್ದರ್ಜೆಗೆ ಬರುತ್ತಿದೆ. ಈಗಾಗಲೇ ಸಾವಿರಾರು ಟವರ್‌ಗಳನ್ನು ಹಾಕುತ್ತಿರುವ ಬಿಎಸ್‌ಎನ್‌ಎಲ್, 4ಜಿ ಜೊತೆ ಜೊತೆಗೆ 5ಜಿ ಇಂಟರ್‌ನೆಟ್ ಸೇವೆ ಒದಿಗುತ್ತಿದೆ. ಈ ಮಹಾ ಒಪ್ಪಂದಿಂದ BSNL ಗೆ ಚೈತನ್ಯ ಬಂದಿದೆ. ಹೊಸ ಹೊಸ ಯೋಜನೆ ಘೋಷಿಸುತ್ತಿರುವ BSNLಮುಂದುವರಿದ ಭಾಗವಾಗಿ ಇದೀಗ ಲೋಗೋ ಬದಲಾಯಿಸಿಕೊಂಡು ಮಾರುಕಟ್ಟೆಯಲ್ಲಿ ಕಮಾಲ್ ಮಾಡಲು ಮುಂದಾಗಿದೆ.
* 91 ರೂಪಾಯಿ ರಿಚಾರ್ಜ್ ಪ್ಲಾನ್, 147 ರೂ.ಗೆ 30 ದಿನದ ಪ್ಲಾನ್, 187 ರೂ.ಗೆ 28 ದಿನಗಳ ಪ್ಲಾನ್, 247 ರೂ.ಗೆ 30 ದಿನ ಪ್ಲಾನ್ ಇದೆ. ಇಂಟರ್‌ನೆಟ್ ಸೇವೆ ಆಧಾರದಲ್ಲಿ ಹಣದಲ್ಲಿ ವ್ಯತ್ಯಾಸ ಕಾರಣಬಹುದು. ಕೇವಲ 1515 ರೂಪಾಯಿಗೆ ಒಂದು ವರ್ಷದ ಮೊಬೈಲ್ ರಿಚಾರ್ಜ್ ಪ್ಲಾನ್ ಸೇರಿದಂತೆ ಹಲವು ಜನ ಸ್ನೇಹಿ ಯೋಜನೆ ಘೋಷಿಸಿದೆ.
* ಈ ಹಿಂದೆ ಕೇಂದ್ರ ಸರ್ಕಾರವು ಬಿಳಿ ನೀಲಿ ಮತ್ತು ಘಾಡ ನೀಲಿ ಬಣ್ಣದಲ್ಲಿದ್ದ ದೂರ ದರ್ಶನದ (DD news logo) ಲೋಗೋವನ್ನು ಕೇಸರಿಮಯವಾಗಿಸಿತ್ತು. ಇದಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೆಂಡವಾಗಿದ್ದವು. ಕೇಸರಿ ಬಣ್ಣದ ಲೋಗೋ ಕಂಡು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ, ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಸರ್ಕಾರಿ ಸ್ವಾಮ್ಯದ BSNL ಲೋಗೋ ಅನ್ನು ಕೇಸರಿ, ಬಿಳಿ ಹಸಿರು ಬಣ್ಣ ಮಾಡಲಾಗಿದೆ. ಇದರಲ್ಲಿ ಕೇಸರಿ ಬಣ್ಣ ವಿಪಕ್ಷಗಳಿಗೆ ಕಣ್ಣು ಕುಕ್ಕುವ, ವಿವಾದ ಸೃಷ್ಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಬುಧವಾರ, 23 ಅಕ್ಟೋಬರ್ 2024
11:53 ಪೂರ್ವಾಹ್ನ
Daily PDF
BSNL ಲೋಗೋ ಬದಲಾವಣೆ
Authored by:
Yallamma G