* ಜಗತ್ತಿನ ಎರಡನೇ ಅತಿದೊಡ್ಡ ವಜ್ರ ಉತ್ಪಾದಕ ದೇಶ ಬೋಟ್ಸ್‌ವಾನಾದಲ್ಲಿ ಬರೋಬ್ಬರಿ 2,492 ಕ್ಯಾರೆಟ್‌ನ (499 ಗ್ರಾಂ) ವಜ್ರದ ಕಲ್ಲು ಪತ್ತೆಯಾಗಿದೆ. ಇದು ವಿಶ್ವದಲ್ಲಿ ಇದುವರೆಗೆ ಪತ್ತೆ ಯಾದ ಎರಡನೇ ಅತಿ ದೊಡ್ಡ ಗಾತ್ರದ ವಜ್ರ ಎಂಬ ದಾಖಲೆಗೆ ಪಾತ್ರವಾಗಿದೆ. ಜೊತೆಗೆ ಕಳೆದ 100 ವರ್ಷಗಳಲ್ಲಿ ಕಂಡುಬಂದ ಅತಿ ದೊಡ್ಡ ಗಾತ್ರದ ವಜ್ರ, ಎಂಬ ದಾಖಲೆಗೂ ಪಾತ್ರವಾಗಿದೆ.
* ಪಶ್ಚಿಮ ಬೋಟ್ಸ್‌ವಾನಾದಲ್ಲಿ ಗಣಿಗಾರಿಕೆಯಲ್ಲಿ ತೊಡಗಿರುವ ಕೆನಡಾದ ಗಣಿಗಾರಿಕೆ ಕಂಪನಿ ಲುಕಾರಾ ಡೈಮಂಡ್ ಕಾರ್ಪ್ ಉತ್ಕೃಷ್ಟ ಗುಣಮಟ್ಟದ ವಜ್ರದ ಶಿಲೆ ಪತ್ತೆಯಾಗಿರುವುದನ್ನು ಖಚಿತಪಡಿಸಿದೆ. ಎಕ್ಸ್-ರೇ ತಂತ್ರಜ್ಞಾನ ಆಧರಿಸಿ ಇದನ್ನು ಪತ್ತೆ ಮಾಡಲಾಗಿದೆ ಎಂದು ಸಂಸ್ಥೆಯು ತಿಳಿಸಿದೆ.
* 1905ರಲ್ಲಿ ದಕ್ಷಿಣ ಆಫ್ರಿಕಾದ ಕಲ್ಲಿನಾನ್‌ನಲ್ಲಿ 3106 ಕ್ಯಾರೆಟ್‌ನ ವಜ್ರ ಪತ್ತೆಯಾಗಿದ್ದು, ಇದುವರೆಗೆ ದೊರೆತಿರುವ ಅತಿದೊಡ್ಡ ಗಾತ್ರದ ವಜ್ರ ಎಂಬ ದಾಖಲೆ ಹೊಂದಿದೆ. ಇದರ ಕೆಲ ತುಂಡುಗಳನ್ನು ಬ್ರಿಟಿಷ್ ಮನೆತನದ ಕಿರೀಟಗಳಿಗೆ ಬಳಸಲಾಗಿತ್ತು
* ಈ ಅಸಾಮಾನ್ಯ 2,492-ಕ್ಯಾರೆಟ್ ವಜ್ರದ ಕುರಿತಂತೆ ನಾವು ಅಚ್ಚರಿಗೊಳಗಾಗಿದ್ದೇವೆ ಎಂದು ಲುಕಾರಾದ ಅಧ್ಯಕ್ಷ ವಿಲಿಯಂ ಲ್ಯಾಂಬ್ ಹೇಳಿದ್ದಾರೆ.
ಬೋಟ್ಸ್‌ವಾನಾದಲ್ಲಿ ವಿಶ್ವದ 2ನೇ ಅತಿದೊಡ್ಡ ವಜ್ರ ಪತ್ತೆ
Published by Yallamma G
23 ಆಗಸ್ಟ್ 2024