➤ ಭಾರತದ ಖ್ಯಾತ ಅಂತರರಾಷ್ಟ್ರೀಯ ನಿಯಮ ತಜ್ಞ ಮತ್ತು ಶಿಕ್ಷಣತಜ್ಞ ಡಾ. ಬಿಮಲ್ ಎನ್. ಪಟೇಲ್ (Dr. Bimal N. Patel) ಅವರು ಜರ್ಮನಿಯ ಹ್ಯಾಂಬರ್ಗ್‌ನಲ್ಲಿರುವ ಅಂತರರಾಷ್ಟ್ರೀಯ ಸಮುದ್ರ ಕಾನೂನು ನ್ಯಾಯಾಧಿಕರಣದ (ITLOS - International Tribunal for the Law of the Sea) ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮಹತ್ವದ ನೇಮಕಾತಿಯು ಸಮುದ್ರ ಕಾನೂನು ಕ್ಷೇತ್ರದಲ್ಲಿ ಭಾರತದ ಜಾಗತಿಕ ಉಪಸ್ಥಿತಿಯನ್ನು ಮತ್ತಷ್ಟು ಬಲಪಡಿಸಿದೆ.
- ಅಧಿಕಾರಾವಧಿ: ಬಿಮಲ್ ಪಟೇಲ್ ಅವರು 9 ವರ್ಷಗಳ ಅವಧಿಗೆ (2026 ರಿಂದ 2035) ITLOS ನ್ಯಾಯಾಧೀಶರಾಗಿ ಸೇವೆ ಸಲ್ಲಿಸಲಿದ್ದಾರೆ.
- ಚುನಾವಣೆ: ನ್ಯೂಯಾರ್ಕ್‌ನಲ್ಲಿರುವ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ UNCLOS ಸದಸ್ಯ ರಾಷ್ಟ್ರಗಳ 36ನೇ ಸಭೆಯಲ್ಲಿ ಬಿಮಲ್ ಪಟೇಲ್ ಅವರು 168 ಚಲಾವಣೆಯಾದ ಸಿಂಧು ಮತಗಳಲ್ಲಿ 115 ಮತಗಳನ್ನು ಪಡೆಯುವ ಮೂಲಕ ಚುನಾಯಿತರಾಗಿದ್ದರು.
- ಭಾರತದ ಪ್ರಾತಿನಿಧ್ಯ: ಇವರು ITLOS ನಿಕಟಪೂರ್ವ ಉಪಾಧ್ಯಕ್ಷೆಯಾಗಿದ್ದ ಭಾರತದ ನೀರು ಚಾಧಾ (Neeru Chadha) ಅವರ ಅವಧಿ ಮುಕ್ತಾಯಗೊಂಡ ನಂತರ ಅವರ ಸ್ಥಾನವನ್ನು ಅಲಂಕರಿಸಿದ್ದಾರೆ.
- ಇತರ ನ್ಯಾಯಾಧೀಶರು: ಬಿಮಲ್ ಪಟೇಲ್ ಅವರೊಂದಿಗೆ ಘಾನಾ, ಬ್ರೆಜಿಲ್, ಟುನೀಶಿಯಾ ಮತ್ತು ವಿಯೆಟ್ನಾಂ ದೇಶಗಳ ನಾಲ್ವರು ನ್ಯಾಯಾಧೀಶರು ಸಹ ಪ್ರಮಾಣವಚನ ಸ್ವೀಕರಿಸಿದ್ದಾರೆ.
➤ ಡಾ. ಬಿಮಲ್ ಪಟೇಲ್ ಅವರ ಹಿನ್ನೆಲೆ:
- ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (RRU): ಇವರು ಗುಜರಾತ್‌ನ ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಕುಲಪತಿಯಾಗಿ (Vice-Chancellor) ಸೇವೆ ಸಲ್ಲಿಸಿದ್ದಾರೆ.
- ವಿಶ್ವಸಂಸ್ಥೆ ನಿಯೋಗ: ಇವರು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಕಾನೂನು ಆಯೋಗದ (UN International Law Commission) ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
- ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿ: ಭಾರತ ಸರ್ಕಾರದ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯದ ಕೆಳಗೆ ಬರುವ ರಾಷ್ಟ್ರೀಯ ಭದ್ರತಾ ಸಲಹಾ ಮಂಡಳಿಯ (NSAB) ಸದಸ್ಯರಾಗಿದ್ದರು.
- ಉನ್ನತ ಶಿಕ್ಷಣ: ನೆದರ್ಲ್ಯಾಂಡ್ಸ್‌ನ ಲೈಡೆನ್ ವಿಶ್ವವಿದ್ಯಾಲಯ ಮತ್ತು ಜೈಪುರ ನ್ಯಾಷನಲ್ ವಿಶ್ವವಿದ್ಯಾಲಯದಿಂದ ಅಂತರರಾಷ್ಟ್ರೀಯ ಕಾನೂನು ವಿಷಯದಲ್ಲಿ ಡಾಕ್ಟರೇಟ್ (PhD) ಪದವಿ ಪಡೆದಿದ್ದಾರೆ.
➤ ಅಂತರರಾಷ್ಟ್ರೀಯ ಸಮುದ್ರ ಕಾನೂನು ನ್ಯಾಯಾಧಿಕರಣ (ITLOS):
- ಸ್ಥಾಪನೆ: 1982ರ ವಿಶ್ವಸಂಸ್ಥೆಯ ಸಮುದ್ರ ಕಾನೂನು ಸಮಾವೇಶದ (UNCLOS - United Nations Convention on the Law of the Sea) ಅಡಿಯಲ್ಲಿ ಸ್ಥಾಪಿತವಾದ ಸ್ವತಂತ್ರ ನ್ಯಾಯಾಂಗ ಸಂಸ್ಥೆಯಾಗಿದೆ.
- ಪ್ರಧಾನ ಕಚೇರಿ: ಹ್ಯಾಂಬರ್ಗ್, ಜರ್ಮನಿ (Hamburg, Germany).
- ಒಟ್ಟು ನ್ಯಾಯಾಧೀಶರ ಸಂಖ್ಯೆ: ITLOS ಒಟ್ಟು 21 ಸ್ವತಂತ್ರ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.
- ಕಾರ್ಯ: ಜಾಗತಿಕವಾಗಿ ಸಮುದ್ರಗಳು ಮತ್ತು ಮಹಾಸಾಗರಗಳ ಮೇಲಿನ ವಿವಾದಗಳನ್ನು ಬಗೆಹರಿಸುವುದು ಹಾಗೂ UNCLOS ನಿಯಮಗಳನ್ನು ವ್ಯಾಖ್ಯಾನಿಸುವುದು.
- ಸದಸ್ಯತ್ವ: ಪ್ರಸ್ತುತ 172 ದೇಶಗಳು ಈ ಸಮಾವೇಶಕ್ಕೆ ಒಪ್ಪಿಗೆ ನೀಡಿವೆ.
ಅಂತರರಾಷ್ಟ್ರೀಯ ಸಮುದ್ರ ಕಾನೂನು ನ್ಯಾಯಾಧಿಕರಣದ (ITLOS) ನ್ಯಾಯಾಧೀಶರಾಗಿ ಭಾರತದ ಬಿಮಲ್ ಪಟೇಲ್ ಪ್ರಮಾಣವಚನ ಸ್ವೀಕಾರ
Published by Akshata Halli
1 hour ago