➤ ಭಾರತ ಮತ್ತು ಇಸ್ರೇಲ್ ನಡುವೆ ಸೆಪ್ಟೆಂಬರ್ 8, 2025 ರಂದು ನವದೆಹಲಿಯಲ್ಲಿ ಸಹಿ ಹಾಕಲಾಗಿದ್ದ, ಪ್ರಸ್ತುತ 800 ಮಿಲಿಯನ್ ಡಾಲರ್ ದ್ವಿಪಕ್ಷೀಯ ಹೂಡಿಕೆಯನ್ನು ಮತ್ತಷ್ಟು ಹೆಚ್ಚಿಸುವ ಮತ್ತು ಸುರಕ್ಷಿತ ಹಾಗೂ ಪಾರದರ್ಶಕ ಹೂಡಿಕೆ ವಾತಾವರಣ ನಿರ್ಮಿಸುವ ಮಹತ್ವದ ದ್ವಿಪಕ್ಷೀಯ ಹೂಡಿಕೆ ಒಪ್ಪಂದವು ಜುಲೈ 4 ರಿಂದ ಅಧಿಕೃತವಾಗಿ ಜಾರಿಗೆ ಬಂದಿದೆ.
- ಹೂಡಿಕೆದಾರರಿಗೆ ರಕ್ಷಣೆ: ಈ ಒಪ್ಪಂದವು ಅಂತರರಾಷ್ಟ್ರೀಯ ಹೂಡಿಕೆ ಕಾನೂನಿನ ಆಧುನಿಕ ತತ್ವಗಳ ಆಧಾರದ ಮೇಲೆ ಹೂಡಿಕೆದಾರರು ಮತ್ತು ಅವರ ಹೂಡಿಕೆಗೆ ಬಲವಾದ ರಕ್ಷಣೆಯನ್ನು ಒದಗಿಸುತ್ತದೆ.
- ಸಾರ್ವಭೌಮ ನೀತಿ ಸ್ವಾತಂತ್ರ್ಯ (Sovereign Policy Space): ಹೂಡಿಕೆದಾರರಿಗೆ ರಕ್ಷಣೆ ನೀಡುವ ಜೊತೆಗೆ, ದೇಶದ ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಗೆ ಧಕ್ಕೆ ಬಾರದಂತೆ ಸ್ವತಂತ್ರ ಆರ್ಥಿಕ ನೀತಿಗಳನ್ನು ರೂಪಿಸುವ ಸಾರ್ವಭೌಮ ಹಕ್ಕನ್ನು ಉಭಯ ದೇಶಗಳು ಉಳಿಸಿಕೊಂಡಿವೆ.
- ಸ್ವತಂತ್ರ ವಿವಾದ ಇತ್ಯರ್ಥ ವ್ಯವಸ್ಥೆ: ಹೂಡಿಕೆದಾರರು ಮತ್ತು ಸರ್ಕಾರದ ನಡುವೆ ಯಾವುದೇ ಆರ್ಥಿಕ ವಿವಾದ ಉಂಟಾದರೆ, ಅದನ್ನು ಪಾರದರ್ಶಕವಾಗಿ ಬಗೆಹರಿಸಲು ಸ್ವತಂತ್ರ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಜೂನ್ ತಿಂಗಳ ಪ್ರಚಲಿತ ಘಟನೆಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ