* ಕರ್ನಾಟಕದ ಚಾಮರಾಜನಗರದ ಹಿರಿಯ ಬಿಜೆಪಿ ಸಂಸದ ಹಾಗೂ ಮಾಜಿ ಕೇಂದ್ರ ಸಚಿವರಾದ 76 ವರ್ಷ ವಯಸ್ಸಿನ ಶ್ರೀನಿವಾಸ ಪ್ರಸಾದ್ ಅವರು ಏಪ್ರಿಲ್ 29 (ಸೋಮವಾರ) ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ.
* ಶ್ರೀನಿವಾಸ ಪ್ರಸಾದ್ ಅವರ ಪತ್ನಿ ಭಾಗ್ಯಲಕ್ಷ್ಮೀ ಅವರ ಪುತ್ರಿಯರಾದ ಪ್ರತಿಮಾ ಪ್ರಸಾದ್ ಪೂರ್ಣಿಮಾ ಪ್ರಸಾದ್ ಮತ್ತು ಪೂನಂ ಪ್ರಸಾದ್ ಅಳಿಯಂದಿರಾದ ಮಾಜಿ ಶಾಸಕಕರಾದ ಹರ್ಷವರ್ಧನ್ ಅವರು ಬಿಜೆಪಿಯ ಮುಖಂಡರಾದ ಡಾ ಮೋಹನ್ ಮತ್ತು ಐವರು ಮೊಮ್ಮಕಳು ಕೂಡಾ ಇದ್ದಾರೆ.
* ಮೂತ್ರಕೋಶದ ಸೋಂಕಿನ ಕಾರಣಕ್ಕೆ ಅವರು ಏಪ್ರಿಲ್ 22 ರಂದು ಆಸ್ಪತ್ರೆಗೆ ದಾಖಲು ಆಗಿದ್ದರು ಮತ್ತು ಅಂದಿನಿಂದ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆಯನ್ನು ನೀಡಲಾಗುತಿತ್ತು.
* ಅಶೋಕಪುರಂನ ಸರ್ಕಾರಿ ಶಾಲೆಯ ಆವರಣದಲ್ಲಿ ಪಾರ್ಥಿವ ಶರೀರದ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಮತ್ತು ಸುತ್ತೂರು ಮಠಾಧೀಶ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಅಂತಿಮ ನಮನ ಸಲ್ಲಿಸಿದರು.
* 1974ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಅವರು 1980ರಲ್ಲಿ ಮೊದಲ ಬಾರಿಗೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸಂಸದರಾಗಿ ಲೋಕಸಭೆಗೆ ಕಾಲಿಟ್ಟರು. 1984, 1989, 1991ರಲ್ಲೂ ಕಾಂಗ್ರೆಸ್ ನಿಂದ ಗೆಲುವು ಸಾಧಿಸಿದರು.
* ಶ್ರೀನಿವಾಸ್ ಪ್ರಸಾದ್ ಅವರು 1999 ರಿಂದ 2004 ರ ವರೆಗೆ ಕೇಂದ್ರದಲ್ಲಿ ಗ್ರಾಹಕರ ವ್ಯವಹಾರಗಳನ್ನು ಸಾರ್ವಜನಿಕರ ವಿತರಣಾ ಖಾತೆಗೆ ರಾಜ್ಯ ಸಚಿವರಾಗಿ ಕಾರ್ಯ ನಿರ್ವಹಿಸುತಿದ್ದರು.
* 2013 ರಿಂದ 2016 ರವರೆಗೆ ಸಿದ್ದರಾಮಯ್ಯನ ನೇತೃತ್ವದಲ್ಲಿ ಕಂದಾಯ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು ಹಾಗೂ ಮೈತ್ರಿ ಮನಸ್ವಿನಿ ಹಾಗೂ ಪರಿಶಿಷ್ಟರಿಗೆ ಪ್ರತ್ಯಕವಾದ ಸ್ಮಶಾನ ನಿರ್ಮಾಣದ ಯೋಜನೆಗಳ ಶ್ರೀನಿವಾಸ್ ಪ್ರಸಾದ್ ಅವರು ಹಿಂದಿನ ಶಕ್ತಿಯಾಗಿದ್ದರು.
ಮಂಗಳವಾರ, 30 ಎಪ್ರಿಲ್ 2024
12:31 ಅಪರಾಹ್ನ
Daily PDF
ಬಿಜೆಪಿ ಸಂಸದ ಮಾಜಿ ಕೇಂದ್ರ ಸಚಿವ ಶ್ರೀನಿವಾಸ ಪ್ರಸಾದ್ ನಿಧನ
Authored by:
Akshata Halli