* ಭಯೋತ್ಪಾದನೆ, ಸಂಘಟಿತ ಅಪರಾಧ ಮತ್ತು ಅತಿವಾದ ಚಟುವಟಿಕೆಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರ ಭಾರತದ ಮೊದಲ ರಾಷ್ಟ್ರೀಯ ಶಸ್ತ್ರಾಸ್ತ್ರ ಡೇಟಾಬೇಸ್ ಅನ್ನು ಅಧಿಕೃತವಾಗಿ ಆರಂಭಿಸಿದೆ. ಈ ಮಹತ್ವದ ಡೇಟಾಬೇಸ್‌ನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮುನ್ನಡೆಸಿದ್ದು, ಇದಕ್ಕೆ ‘ಲಾಸ್ಟ್, ಲೂಟೆಡ್ ಅಂಡ್ ರಿಕವರ್ಡ್ ಫೈರ್‌ಆರ್ಮ್ ಡೇಟಾಬೇಸ್’ (Lost, Looted and Recovered Firearm Database) ಎಂದು ಹೆಸರಿಸಲಾಗಿದೆ. ಈ ಡೇಟಾಬೇಸ್‌ನ ಮುಖ್ಯ ಉದ್ದೇಶ, ಸರ್ಕಾರದ ಸ್ವಾಮ್ಯದ ಶಸ್ತ್ರಾಸ್ತ್ರಗಳು ಕಳೆದುಹೋಗುವುದು, ಕಳ್ಳತನವಾಗುವುದು ಅಥವಾ ಉಗ್ರರ ಕೈಗೆ ಸೇರುವುದನ್ನು ತಡೆಯುವುದು ಹಾಗೂ ಅವುಗಳ ಸುಲಭ ಪತ್ತೆಗೆ ಸಹಾಯ ಮಾಡುವುದು.
* ಡೇಟಾಬೇಸ್‌ನ ಮಹತ್ವ : ಇದರಿಂದ ಉಗ್ರರು ಸರ್ಕಾರದ ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆ ಕಡಿಮೆಯಾಗಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.
=> ಭಯೋತ್ಪಾದಕ ಸಂಘಟನೆಗಳು ಹಾಗೂ ನಕ್ಸಲೀಯರು ಕಳವು ಮಾಡಿರುವ ಶಸ್ತ್ರಾಸ್ತ್ರಗಳನ್ನು ಪತ್ತೆಹಚ್ಚುವುದು
=> ರಾಜ್ಯ ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳ ನಡುವೆ ಸಮನ್ವಯ ಹೆಚ್ಚಿಸುವುದು
=> ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಬಳಕೆಯನ್ನು ನಿಯಂತ್ರಿಸುವುದು
=> ದೇಶದ ಆಂತರಿಕ ಭದ್ರತೆಯನ್ನು ಮತ್ತಷ್ಟು ಬಲಪಡಿಸುವುದು
* Lost, Looted and Recovered Firearm ಈ ಡೇಟಾಬೇಸ್ ಸರ್ಕಾರದ ಸ್ವಾಮ್ಯದ ಶಸ್ತ್ರಾಸ್ತ್ರಗಳ ಕುರಿತು ಕೇಂದ್ರಿಕೃತ ಡಿಜಿಟಲ್ ಮಾಹಿತಿಸಂಗ್ರಹವಾಗಿದ್ದು, ಇದರಲ್ಲಿ ಈ ಕೆಳಗಿನ ವರ್ಗದ ಶಸ್ತ್ರಾಸ್ತ್ರಗಳ ವಿವರಗಳು ಸೇರಿವೆ:
- ಕಳೆದುಹೋದ (Lost)
- ಕಳ್ಳತನವಾದ (Stolen)
- ಲೂಟಿಯಾದ (Looted)
- ಮರುಪಡೆಯಲ್ಪಟ್ಟ (Recovered)
ಈ ಡೇಟಾಬೇಸ್‌ನಲ್ಲಿ ರಾಜ್ಯ ಪೊಲೀಸ್ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು (CAPFs) ಬಳಸುವ ಸರ್ಕಾರದ ಸ್ವಾಮ್ಯದ ಶಸ್ತ್ರಾಸ್ತ್ರಗಳ ಮಾಹಿತಿ ಒಳಗೊಂಡಿದೆ.
* ಈ ಡೇಟಾಬೇಸ್‌ಗೆ ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಜಮ್ಮು–ಕಾಶ್ಮೀರ, ಉತ್ತರ ಪೂರ್ವ ರಾಜ್ಯಗಳು ಹಾಗೂ ನಕ್ಸಲ್ ಪ್ರಭಾವಿತ ಪ್ರದೇಶಗಳಿಂದ ಡೇಟಾ ಸಂಗ್ರಹಿಸಲಾಗಿ, ಕಳೆದುಹೋದ ಅಥವಾ ಕಳ್ಳತನವಾದ ಶಸ್ತ್ರಾಸ್ತ್ರಗಳ ದೇಶವ್ಯಾಪಿ ಸಮಗ್ರ ಚಿತ್ರಣ ಲಭ್ಯವಾಗಲಿದೆ.
* ತಾಂತ್ರಿಕ ವೈಶಿಷ್ಟ್ಯಗಳು : --
=> NIA ಹೋಸ್ಟ್ ಮಾಡಿರುವ ಅತ್ಯಂತ ಸುರಕ್ಷಿತ ಡಿಜಿಟಲ್ ಪ್ಲಾಟ್‌ಫಾರ್ಮ್
=> ಕೇವಲ ಅಧಿಕೃತ ಭದ್ರತಾ ಮತ್ತು ತನಿಖಾ ಸಂಸ್ಥೆಗಳಿಗೆ ಮಾತ್ರ ಪ್ರವೇಶ
=> ರಿಯಲ್-ಟೈಮ್ ಮಾಹಿತಿ ಲಭ್ಯತೆ, ಶೀಘ್ರ ತನಿಖೆಗೆ ಸಹಾಯಕ
ರವಿವಾರ, 28 ಡಿಸೆಂಬರ್ 2025
7:30 ಪೂರ್ವಾಹ್ನ
Daily PDF
ಭಯೋತ್ಪಾದನೆ ನಿಯಂತ್ರಣಕ್ಕೆ ಭಾರತದ ಮೊದಲ ರಾಷ್ಟ್ರೀಯ ಶಸ್ತ್ರಾಸ್ತ್ರ ಡೇಟಾಬೇಸ್ ಆರಂಭ
Authored by:
Akshata Halli