* ಕರ್ನಾಟಕದ ಭೀಮಗಡ ವನ್ಯಜೀವಿಧಾಮದ 'ಸುತ್ತಲಿನ 11,938 ಹೆಕ್ಟೇರ್ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
* ಇದರಲ್ಲಿ ಒಟ್ಟು 11,413 ಹೆಕ್ಟೇರ್ ಮೀಸಲು ಅರಣ್ಯವಾಗಿದ್ದರೆ, 525 ಹೆಕ್ಟೇರ್ ಕಂದಾಯ ಜಮೀನಾಗಿದೆ. 2023ರ ಆಗಸ್ಟ್ ತಿಂಗಳಲ್ಲಿ ಕರಡು ಅಧಿಸೂಚನೆ ಹೊರಡಿಸಲಾಗಿತ್ತು. ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಲಾಗಿತ್ತು. ಇದೀಗ ಸಚಿವಾಲಯವು ಅಂತಿಮ ಅಧಿಸೂಚನೆ ಹೊರಡಿಸಿದೆ.
* ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ 119 ಚದರ ಕಿ.ಮೀ. ಈ ವನ್ಯಜೀವಿಧಾಮವು ಮಹದಾಯಿ ನದಿಯ ಜಲಾನಯನ ಪ್ರದೇಶದಲ್ಲಿದೆ. ದಾಂಡೇಲಿ ವನ್ಯಜೀವಿಧಾಮ ಹಾಗೂ ಗೋವಾದ ಮಹದಾಯಿ ವನ್ಯಜೀವಿ ಧಾಮದೊಂದಿಗೆ ಗಡಿ ಹಂಚಿಕೊಂಡಿದೆ.
* ಈ ವನ್ಯಜೀವಿಧಾಮದ ವಿಸ್ತೀರ್ಣ 19,402 ಹೆಕ್ಟೇರ್, ಪರಿಸರ ಸೂಕ್ಷ್ಮ ಪ್ರದೇಶವು 13 ಗ್ರಾಮಗಳನ್ನು ಒಳಗೊಂಡಿವೆ. ಕೆಲವೊಂದು ಗ್ರಾಮಗಳಲ್ಲಿ ಪರಿಸರ ಸೂಕ್ಷ್ಮ ಪ್ರದೇಶಕ್ಕಾಗಿ ಕರ್ನಾಟಕ ಸರಕಾರ ಎರಡು ವರ್ಷಗಳೊಳಗೆ ವಲಯ ಮಹಾ ಯೋಜನೆ ಸಿದ್ಧಪಡಿಸಿ ಜಾರಿಗೆ ತರಬೇಕು.
* ಕೆಲವೊಮ್ಮೆ ಘೋಷಿತ ಅರಣ್ಯ ಪ್ರದೇಶದ ಆಚೆಗೂ ವನ್ಯ ಜೀವಿಗಳ ಚಲನವಲನಗಳು ಇರುತ್ತವೆ. ಕೆಲ ಪ್ರಾಣಿಗಳು ಘೋಷಿತ ಅರಣ್ಯ ಭಾಗದಿಂದ ಹೊರ ಹೋಗುವುದು ಮತ್ತು ಬೇರೆ ಅರಣ್ಯದಿಂದ ಪ್ರಾಣಿಗಳು ಬಂದು ಹೋಗುವ ಪ್ರಕ್ರಿಯೆಯೂ ನಡೆಯುತ್ತಿರುತ್ತವೆ.
* ಹೀಗಾಗಿ ವನ್ಯ ಜೀವಿಗಳ ಚಲನವಲನ ಇರುವ ಪ್ರದೇಶ ಮತ್ತು ವನ್ಯ ಪರಿಸರದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳ ರಕ್ಷಣೆ ಮಹತ್ವದ್ದಾಗಿರುತ್ತದೆ. ಹೀಗಾಗಿ ಘೋಷಿತ ಅರಣ್ಯಕ್ಕೆ ಹೊಂದಿಕೊಂಡಿರುವ ಕೆಲ ಪ್ರದೇಶಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಪರಿಗಣಿಸಲಾಗುತ್ತದೆ.
ಭೀಮಗಢ ಪರಿಸರ ಸೂಕ್ಷ್ಮ ಪ್ರದೇಶ
Published by Jyoti Angadi
14 ಡಿಸೆಂಬರ್ 2024