* ವಿಜಯಪುರ ಜಿಲ್ಲೆಯ 'ಪಟ್ಟಣದ ಸಾರಂಗಮಠದ ಚೆನ್ನವೀರ ಸ್ವಾಮೀಜಿ ಪ್ರತಿಷ್ಠಾನದಿಂದ ನೀಡುವ ರಾಷ್ಟ್ರಮಟ್ಟದ 'ಭಾಸ್ಕರ' ಶ್ರೇಷ್ಠ ವಿಜ್ಞಾನಿ ಪ್ರಶಸ್ತಿಗೆ ಇಸ್ರೊ ಮಾಜಿ ಅಧ್ಯಕ್ಷ ಪ್ರೊ. ಎ. ಎಸ್. ಕಿರಣ್ ಕುಮಾರ್ ಅವರನ್ನು ಆಯ್ಕೆ ಮಾಡಲಾಗಿದೆ' ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು ತಿಳಿಸಿದರು.
* ಈ ಪ್ರಶಸ್ತಿಯು 1 ಲಕ್ಷ ನಗದು, ಬೆಳ್ಳಿ ಪ್ರಶಸ್ತಿ ಫಲಕ ಒಳಗೊಂಡಿದ್ದು, ನವೆಂಬರನಲ್ಲಿ ಈ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಸಾರಂಗಮಠದ ಪೀಠಾಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅವರು ಸೆಪ್ಟೆಂಬರ್ 26 ರಂದು ತಿಳಿಸಿದ್ದಾರೆ.
* 'ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ಪ್ರೇರಣೆಯಿಂದ ಜಿಲ್ಲೆಯ 11ನೇ ಶತಮಾನದ ಖಗೋಳ ವಿಜ್ಞಾನಿ, ಗಣಿತಜ್ಞ ಭಾಸ್ಕರಾಚಾರ್ಯ ಅವರ ಸ್ಮರಣೆಯಲ್ಲಿ ಈ ಪ್ರಶಸ್ತಿ ನಾಲ್ಕು ವರ್ಷಗಳಿಂದ ನೀಡಲಾಗುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಅವರು ತಿಳಿಸಿದರು.
* ಇದುವರೆಗೆ ಸಿ.ಎನ್.ಆರ್. ರಾವ್, ಯು.ಆರ್.ರಾವ್, ಎಸ್.ಎ.ಪಾಟೀಲ ಮತ್ತು ಕೆ.ಕಸ್ತೂರಿ ರಂಗನ್ ಅವರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ' ಎಂದರು.
ಬುಧವಾರ, 27 ಸೆಪ್ಟೆಂಬರ್ 2023
11:08 ಪೂರ್ವಾಹ್ನ
Daily PDF
'ಭಾಸ್ಕರ' ಪ್ರಶಸ್ತಿಗೆ ಪ್ರೊ.ಕಿರಣ್ ಕುಮಾರ ಅವರು ಆಯ್ಕೆ
Authored by:
Bhagya R K