* ಚೀನಾದ ಅಧ್ಯಕ್ಷ ಷು ಜಿನ್‌ಪಿಂಗ್ ಅವರು ಹಿರಿಯ ರಾಜತಾಂತ್ರಿಕ ಕ್ಸು ಫೀಹಾಂಗ್ ಅವರನ್ನು ಭಾರತಕ್ಕೆ ನೂತನ ರಾಯಭಾರಿಯಾಗಿ ನೇಮಿಸಿದ್ದಾರೆ.
* ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ಸೇನಾ ಬಿಕ್ಕಟ್ಟು ತಲೆದೋರಿರುವ ಹಿನ್ನೆಲೆಯಲ್ಲಿ ಭಾರತಕ್ಕೆ ರಾಯಭಾರಿ ನೇಮಿಸುವುದನ್ನು ಚೀನಾ 18 ತಿಂಗಳು ವಿಳಂಬ ಮಾಡಿದೆ.
* ಷು ಫೀಹಾಂಗ್ ಅವರು ಈ ಮೊದಲು ಅಫ್ಘಾನಿಸ್ತಾನ ಮತ್ತು ರೊಮೇನಿಯಾ ದೇಶಗಳಿಗೆ ಚೀನಾದ ರಾಯಭಾರಿಯಾಗಿದ್ದರು.
* ಈ ಮೊದಲು ಭಾರತದ ಚೀನಾ ರಾಯಭಾರಿಯಾಗಿದ್ದ ಸನ್ ವೀಡಂಗ್ ಅವರ ಕರ್ತವ್ಯಾವಧಿಯು 2022ರ ಅಕ್ಟೋಬರ್‌ನಲ್ಲಿ ಮುಕ್ತಾಯವಾಗಿತ್ತು.
ಬುಧವಾರ, 08 ಮೇ 2024
10:51 ಪೂರ್ವಾಹ್ನ
Daily PDF
ಭಾರತಕ್ಕೆ ಚೀನಾ ರಾಯಭಾರಿಯಾಗಿ ಷು ಪೀಹಾಂಗ್ ನೇಮಕ
Authored by:
Bhagya R K