* ರಷ್ಯಾ ಬ್ಯಾಂಕುಗಳಲ್ಲಿ ಭಾರತೀಯರು ಸುಲಭವಾಗಿ ಖಾತೆ ತೆರೆಯಲು ಅನುಕೂಲವಾಗುವಂತೆ ಪುಟಿನ್ ಸರಕಾರವು ನಿಯಮಗಳನ್ನು ಸಿದ್ಧಪಡಿಸಿದೆ.
* ಭಾರತೀಯರು ರಷ್ಯನ್ ಬ್ಯಾಂಕುಗಳಿಗೆ ತೆರಳದೆಯೇ, ತಾವಿದ್ದಲ್ಲಿಂದಲೇ ರಷ್ಯಾದ ಬ್ಯಾಂಕಿಂಗ್ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
* ಈ ಕ್ರಮದಿಂದ ಎರಡೂ ದೇಶಗಳ ನಡುವೆ ವಿತ್ತೀಯ ಸಂಬಂಧ ಬಲಗೊಳ್ಳುವ ಹಾಗೂ ಹೂಡಿಕೆ ಅವಕಾಶಗಳು ಹೆಚ್ಚುವ ನಿರೀಕ್ಷೆಯನ್ನು ರಷ್ಯಾ ವ್ಯಕ್ತಪಡಿಸಿದೆ. ರಷ್ಯಾಗೆ ಆಗಮಿಸುವ ಭಾರತೀಯ ಪ್ರವಾಸಿಗರು ಹಾಗೂ ವಿದ್ಯಾರ್ಥಿಗಳಿಗೆ ಇದರಿಂದ ಹೆಚ್ಚಿನ ಅನುಕೂಲ ವಾಗಲಿದೆ ಎಂದು ರಷ್ಯಾ ರಾಯಭಾರ ಕಚೇರಿ ತಿಳಿಸಿದೆ.
* ರಷ್ಯಾದ ಬ್ಯಾಂಕ್ ಖಾತೆಗಳನ್ನು ತೆರೆಯಲು ಅಥವಾ ರಷ್ಯಾದ ಬ್ಯಾಂಕ್‌ಗಳಲ್ಲಿ ಹಣವನ್ನು ರಿಮೋಟ್ ಆಗಿ ಠೇವಣಿ ಮಾಡಲು ಸಾಧ್ಯವಿದೆ” ಎಂದು ರಷ್ಯಾದ ರಾಯಭಾರ ಕಚೇರಿ ತಿಳಿಸಿದೆ.
ಶುಕ್ರವಾರ, 03 ನವೆಂಬರ್ 2023
9:51 ಅಪರಾಹ್ನ
Daily PDF
ಭಾರತೀಯರು ರಷ್ಯಾ ಬ್ಯಾಂಕ್ನಲ್ಲಿ ಖಾತೆ ತೆರೆಯಲು ಅವಕಾಶ
Authored by:
Bhagya R K