* ದೇಶದಲ್ಲಿ ಪ್ರಾಚೀನ ಕಾಲದ ಯುದ್ಧ ತಂತ್ರಗಾರಿಕೆಗಳನ್ನು ಪರಿಶೋಧಿಸಿ ಅವುಗಳನ್ನು ಸೇನೆಗೆ ಅಳವಡಿಸುವ ಮೂಲಕ ಭದ್ರತಾ ಪಡೆಗಳ ಸಾಮರ್ಥ್ಯ ವನ್ನು ಹೆಚ್ಚಿಸಿ ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸುವ 'ಉದ್ಭವ್' ಯೋಜನೆಯನ್ನು ಭಾರತೀಯ ಸೇನೆಯ ಅಕ್ಟೋಬರ್ 21 ರಂದು ಪ್ರಾರಂಭಿಸಿದೆ.
* ಭಾರತದ ಶ್ರೀಮಂತ ಮಿಲಿಟರಿ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸಲು ವಿಶೇಷವಾಗಿ ರಾಷ್ಟ್ರದ ಭದ್ರತೆಯಲ್ಲಿ ಸಶಸ್ತ್ರ ಪಡೆಗಳ "ಸಾಟಿಯಿಲ್ಲದ ಶೌರ್ಯ" ವನ್ನು ಪ್ರದರ್ಶಿಸಲು ಆಯೋಜಿಸಲಾದ ಭಾರತೀಯ ಮಿಲಿಟರಿ ಪರಂಪರೆ ಉತ್ಸವದ ಮೊದಲ ಆವೃತ್ತಿಯನ್ನು ದೆಹಲಿಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 'ಪ್ರಾಜೆಕ್ಟ್ ಉದ್ಭವ್' ಚಾಲನೆ ನೀಡಿದ್ದರು.
* ಈ ಯೋಜನೆಗೆ ಚಾಲನೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಹಾಭಾರತ, ಕೌಟಿಲ್ಯನ ಅರ್ಥಶಾಸ್ತ್ರ ಮತ್ತು ಕಾಮಂಡಕಿಯ ನೀತಿಸಾರದಿಂದ ಹೆಕ್ಕಿ ತೆಗೆದ 75 ತಂತ್ರಗಳನ್ನು ಈ ಉದ್ಭವ್ ಪ್ರಾಜೆಕ್ಟ್‌ನಲ್ಲಿ ಸೇನಾ ತರಬೇತಿ ಕಮಾಂಡ್ ಅಳವಡಿಸಿಕೊಂಡಿದೆ ಎಂದು ತಿಳಿಸಿದರು.
* `ಅಹೋಮ್ ಸಾಮ್ರಾಜ್ಯವು 600 ವರ್ಷಗಳ ಕಾಲ ಯಶಸ್ವಿಯಾಗಿ ಅಳ್ವಿಕೆ ನಡೆಸಿದ, ಪದೇ ಪದೇ ಮೊಘಲರನ್ನು ಸೋಲಿಸಿದ ನಿದರ್ಶನವನ್ನು ನಾವು ಹೊಂದಿದ್ದೇವೆ' ಎಂದು 'ಉದ್ಭವ್ ಪ್ರಾಜೆಕ್ಟ್' ಉಪಕ್ರಮ ಮುನ್ನಡೆಸುತ್ತಿರುವ ಸೇನಾ ಉಪ ಮುಖ್ಯಸ್ಥ (ತಂತ್ರಗಾರಿಕೆ) ಲೆಫ್ಟಿನೆಂಟ್ ಜನರಲ್ ತರುಣ್ ಕುಮಾರ್ ಐಚ್ ತಿಳಿಸಿದರು.
* ಭಾರತೀಯ ಮಿಲಿಟರಿ ಹೆರಿಟೇಜ್ ಫೆಸ್ಟಿವಲ್ ಸಂಭಾಷಣೆಗಳು, ಕಲೆ, ನೃತ್ಯ, ನಾಟಕ, ಕಥೆ-ಹೇಳಿಕೆ ಮತ್ತು ಪ್ರದರ್ಶನಗಳ ಮೂಲಕ ಶತಮಾನಗಳಿಂದ ವಿಕಸನಗೊಂಡ ಭಾರತದ ಶ್ರೀಮಂತ ಮಿಲಿಟರಿ ಸಂಸ್ಕೃತಿ ಮತ್ತು ಪರಂಪರೆಯನ್ನು ಆಚರಿಸುವ ಗುರಿಯನ್ನು ಹೊಂದಿದೆ ಎಂದು ಸಚಿವಾಲಯ ಹೇಳಿದೆ.
* ಪ್ರಾಜೆಕ್ಟ್ 'ಉದ್ಭವ್' ಭಾರತೀಯ ಸೇನೆ ಮತ್ತು ಯುನೈಟೆಡ್ ಸರ್ವೀಸ್ ಇನ್ಸ್ಟಿಟ್ಯೂಷನ್ ಆಫ್ ಇಂಡಿಯಾದ ಜಂಟಿ ಸಹಯೋಗವಾಗಿದೆ.
ಸೋಮವಾರ, 23 ಅಕ್ಟೋಬರ್ 2023
10:59 ಪೂರ್ವಾಹ್ನ
Daily PDF
ಭಾರತೀಯ ಸೇನೆಯ 'ಉದ್ಭವ್' ಯೋಜನೆಗೆ ಚಾಲನೆ
Authored by:
Bhagya R K