➤ ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಅಕ್ರಮ ಬುಕಿಂಗ್‌ಗಳನ್ನು ತಡೆಗಟ್ಟಲು, ಭಾರತೀಯ ರೈಲ್ವೆಯು ದೇಶಾದ್ಯಂತ 'ಒನ್-ಟೈಮ್ ಪಾಸ್‌ವರ್ಡ್' (OTP) ಆಧಾರಿತ ಟಿಕೆಟಿಂಗ್ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಈ ಹೊಸ ಡಿಜಿಟಲ್ ಸುರಕ್ಷತಾ ಕ್ರಮವು ಜನವರಿ 12 ರಿಂದ ಜಾರಿಗೆ ಬಂದಿದೆ.
➤ ಮೊದಲ ಹಂತದಲ್ಲಿ ರಾಜಧಾನಿ, ಶತಾಬ್ದಿ ಮತ್ತು ದುರಂತೋ ಎಕ್ಸ್‌ಪ್ರೆಸ್ ಸೇರಿದಂತೆ ಸುಮಾರು 300 ಪ್ರಮುಖ ರೈಲುಗಳಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ. ಆನ್‌ಲೈನ್ ಅಥವಾ ರೈಲ್ವೆ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯಲು ಪ್ರಯಾಣಿಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಒದಗಿಸಬೇಕು. ವ್ಯವಸ್ಥೆಯು ಮೊಬೈಲ್‌ಗೆ OTP ಕಳುಹಿಸುತ್ತದೆ, ಅದನ್ನು ದೃಢೀಕರಿಸಿದ ನಂತರವೇ ಟಿಕೆಟ್ ವಿತರಿಸಲಾಗುತ್ತದೆ. ಇದು ಆನ್‌ಲೈನ್ ಬುಕಿಂಗ್ ಮತ್ತು ಕೌಂಟರ್ ಟಿಕೆಟ್ ಎರಡಕ್ಕೂ ಅನ್ವಯಿಸುತ್ತದೆ.
➤ ಉದ್ದೇಶಗಳು:-
=> ಅಕ್ರಮ ಬುಕಿಂಗ್ ತಡೆ: ಅನಧಿಕೃತ ಏಜೆಂಟ್‌ಗಳು ಬೃಹತ್ ಪ್ರಮಾಣದಲ್ಲಿ (Bulk Booking) ಟಿಕೆಟ್ ಬುಕ್ ಮಾಡುವುದನ್ನು ತಪ್ಪಿಸುವುದು.
=> ಗುರುತಿನ ದೃಢೀಕರಣ: ಪ್ರಯಾಣಿಕರ ನಿಜವಾದ ಗುರುತನ್ನು ಖಚಿತಪಡಿಸಿಕೊಳ್ಳುವುದು ಮತ್ತು ನಕಲಿ ಬುಕಿಂಗ್‌ಗಳನ್ನು ನಿಯಂತ್ರಿಸುವುದು.
=> ಪಾರದರ್ಶಕತೆ: ರೈಲ್ವೆ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರುವುದು ಮತ್ತು ಸಾಮಾನ್ಯ ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್ ಸಿಗುವಂತೆ ಮಾಡುವುದು.
➤ ಆನ್‌ಲೈನ್ ಮತ್ತು ಕೌಂಟರ್ ಬುಕಿಂಗ್‌ಗಳೆರಡಕ್ಕೂ ಇದು ಅನ್ವಯಿಸಲಿದ್ದು, ಅನಧಿಕೃತ ಏಜೆಂಟ್‌ಗಳ ಹಾವಳಿಯನ್ನು ನಿಯಂತ್ರಿಸುವ ಗುರಿ ಹೊಂದಿದೆ. ಪ್ರಯಾಣಿಕರ ಭದ್ರತೆ ಮತ್ತು ಮೂಲಸೌಕರ್ಯದ ದುರ್ಬಳಕೆಯನ್ನು ತಡೆಯಲು ರೈಲ್ವೆ ಇಲಾಖೆ ತೆಗೆದುಕೊಂಡ ಪ್ರಮುಖ ಡಿಜಿಟಲ್ ಹೆಜ್ಜೆ ಇದಾಗಿದೆ.
ಭಾರತೀಯ ರೈಲ್ವೆಯಿಂದ ದೇಶಾದ್ಯಂತ OTP ಆಧಾರಿತ ಟಿಕೆಟಿಂಗ್ ವ್ಯವಸ್ಥೆ ಜಾರಿ
Published by Akshata Halli
15 ಜನವರಿ 2026