* ಭಾರತೀಯ ನೌಕಾಪಡೆಯ ಮಹಿಳಾ ಅಧಿಕಾರಿಗಳಿಬ್ಬರು 2 ತಿಂಗಳ ಸಾಗರೋತ್ತರ ಪ್ರಯಾಣ ಪೂರ್ಣ ಗೊಳಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
* ಗೋವಾದಿಂದ ಫೆಬ್ರವರಿ 28ರಂದು ಐಎನ್‌ಎಸ್‌ವಿ ತಾರಿಣಿ ನೌಕೆಯಲ್ಲಿ ಪ್ರಯಾಣ ಬೆಳೆಸಿದ್ದ ಲೆಫ್ಟಿನೆಂಟ್ ಕಮಾಂಡರ್ ಗಳಾದ ದಿಲ್ಲಾ ಕೆ. ಮತ್ತು ರೂಪಾ ಎ. ಅವರು ಏಪ್ರಿಲ್ 21ರಂದು ಬಂದಿಳಿದಿದ್ದಾರೆ. ಸಾಗರೋತ್ತರ ಪ್ರಯಾಣ ಯಶಸ್ವಿಗೊಳಿಸುವ ಮೂಲಕ ಈ ಸಾಧನೆ ಮಾಡಿದ ಭಾರತದ ಮೊದಲ ಮಹಿಳೆಯರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
* ದಿಲ್ಲಾ ಕೆ. ಮತ್ತು ರೂಪಾ ಎ. ಅವರು ಹಿಂದೂ ಮಹಾಸಾಗರದಲ್ಲಿ 22 ದಿನಗಳ ಕಾಲ ಪಯಣಿಸಿ, ಮಾರ್ಚ್ 21ರಂದು ಮಾರಿಷಸ್ ಪೋರ್ಟ್ ಲೂಯಿಸ್‌ಗೆ ತಲುಪಿ, ಅಲ್ಲಿ ಮಾರಿಷಸ್ ಕೋಸ್ಟ್ಗಾರ್ಡ್ ಮತ್ತು ಭಾರತೀಯ ಹೈಕಮಿಷನ್ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದ್ದಾರೆ. ಪ್ರಯಾಣ ಮಧ್ಯೆ ಭಾರೀ ಗಾಳಿ, ಅಲೆಗಳು ಆರ್ಭಟದಂಥ ಪ್ರತಿಕೂಲ ಹವಾಮಾನದ ಸವಾಲಿನ ಪರಿಸ್ಥಿತಿಗಳನ್ನು ಇವರು ಎದುರಿಸಿದ್ದಾರೆ ಎಂದು ವರದಿಯಾಗಿದೆ.
* ಐಎಸ್‌ಎಸ್‌ವಿ ತಾರಿಣಿ : ಭಾರತೀಯ ನೌಕಾಪಡೆಯ ನೌಕಾಯಾನ ನೌಕೆ ಇದಾಗಿದ್ದು 56 ಅಡಿ ಉದ್ದವಿದೆ. ಒಡಿಶಾದ ಗಂಜಾಂ ಜಿಲ್ಲೆಯ 'ತಾರಾ-ತಾರಿಣಿ' ದೇಗುಲದ ತಾರಿಣಿ (ದುರ್ಗಾದೇವಿ) ಹೆಸರನ್ನು ಈ ನೌಕೆಗೆ ಇಡಲಾಗಿದೆ.
ಭಾರತೀಯ ನೌಕಾಪಡೆಯ ಮಹಿಳಾ ಆಧಿಕಾರಿಗಳ ಐತಿಹಾಸಿಕ ಸಾಧನೆ
Published by Yallamma G
25 ಏಪ್ರಿಲ್ 2024